ಗಾಳಿ‌ಮಳೆಯ ಅವಾಂತರ ಹೆಜಮಾಡಿ ಕೋವಿಡ್19 ತಪಾಸಣಾ ಕೇಂದ್ರದ ಹಾರಿ ಹೋದ ತಗಡು ಚಪ್ಪರ ಶಾಮಿಯಾನ.

Featured, ಉಡುಪಿ

ಪಡುಬಿದ್ರಿ : ಭಾನುವಾರ ರಾತ್ರಿ ಬೀಸಿದ ಸಿಡಿಲು ಸಹಿತ ಭಾರೀ ಗಾಳಿ ಮಳೆಗೆ ಉಡುಪಿ ಜಿಲ್ಲಾ ಗಡಿಯ ಹೆಜಮಾಡಿ ತಪಾಸಣಾ ಕೇಂದ್ರಕ್ಕೆ ಹಾಕಲಾದ ತಗಡು ಚಪ್ಪರ ಶಾಮಿಯಾನ ಹಾರಿ ಹೋಗಿದೆ.

ವಿದ್ಯುತ್ ಸಂಪರ್ಕ ಕಡಿತಕೊಂಡು ಸಿಬ್ಬಂದಿಗಳು ಪರದಾಡುವಂತಾಗಿದೆ.ಮಳೆಯಿಂದಾಗಿ ಸಿಬ್ಬಂದಿಗಳ ಕರ್ತವ್ಯ ಕ್ಕೆ ತೊಂದರೆಯಾಗಿದ್ದು,ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಸ್ಥಳಕ್ಕೆ ಕಾಪು ತಾಲೂಕು ತಹಶಿಲ್ದಾರ್ ಮಹಮ್ಮದ್ ಇಸಾಕ್ ಭೇಟಿ ನೀಡಿದ್ದಾರೆ.