ಗುಪ್ತಚರ ವರದಿಯ ಆಧಾರದ ಮೇಲೆ ಕ್ಷೇತ್ರ ಬದಲಿಸ್ತಿದ್ದಾರಂತೆ ಸಿದ್ದರಾಮಯ್ಯ !!!
ಹುಬ್ಬಳ್ಳಿ : ಸಿಎಂ ಸಿದ್ಧರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಅವರು ಇಂಟಲಿಜೆನ್ಸ್ ರಿಪೋರ್ಟ್ ಮೇಲೆ ಕ್ಷೇತ್ರ ಬದಲಾವಣೆ ಮಾಡ್ತಿದ್ದಾರೆ ಅಂತಾ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ಡಾಲರ್ಸ್ ಕಾಲೋನಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೂ ಸಹ ಸೋಲಿನ ಭಯವಿದ್ದು ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ .ಇನ್ನು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಲಿಂಗಾಯತ ಸ್ವತಂತ್ರ ಧರ್ಮ ವಿಚಾರವನ್ನು ಸಿಎಂ ಹುಟ್ಟು ಹಾಕಿದ್ದು, ಲಿಂಗಾಯತ ಧರ್ಮದಲ್ಲಿ ಹಿಂದುಳಿದ ವರ್ಗದವರೂ ಇದ್ದಾರೆ. ಅವರಿಗೆಲ್ಲ ಸದ್ಯ ಮೀಸಲಾತಿ ಇದೆ. ಸ್ವತಂತ್ರ್ಯ ಧರ್ಮವಾದರೆ ಅವರೆಲ್ಲ ಎಲ್ಲಿಗೆ ಹೋಗಬೇಕು. ಹೀಗಾಗಿ ಕಾಂಗ್ರೆಸ್ ಗೆ ಜನರು ತಕ್ಕ ಪಾಠ ಕಲಿಸ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

