ಗುರೂಜಿ ಸಾಯಿ ಈಶ್ವರ್ ಗೆ ಸನಾತನ ಸಂಸ್ಥೆಯಿಂದ ಆಧ್ಯಾತ್ಮಿಕ ಸಂಶೋಧನೆ ಗೆ ಆಹ್ವಾನ.

Featured, ರಾಜ್ಯ ನ್ಯೂಸ್

ಗುರೂಜಿ ಸಾಯಿ ಈಶ್ವರ್ ಗೆ ಸನಾತನ ಸಂಸ್ಥೆಯಿಂದ ಆಧ್ಯಾತ್ಮಿಕ ಸಂಶೋಧನೆ ಗೆ ಆಹ್ವಾನ.

ಕಟಪಾಡಿ: ಉಡುಪಿ ಜಿಲ್ಲೆಯ ವಿವಿಧ ಜನೋಪಯೋಗಿ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವ ಶಂಕರಪುರದ ಸಾಯಿ ಸಾಂತ್ವನ ಮಂದಿರದ ಧರ್ಮದರ್ಶಿ ಗುರೂಜಿ ಸಾಯಿ ಈಶ್ವರ್ ಅವರಿಗೆ ಭಾರತ ದೇಶದ “ಸನಾತನ ಸಂಸ್ಥೆ” ಯು ಆಧ್ಯಾತ್ಮಿಕ ಸಂಶೋಧನಾ ಮತ್ತು ಇತರ ವಿಚಾರವಾಗಿ ಗೋವಾದಲ್ಲಿರುವ ಆಶ್ರಮಕ್ಕೆ ಬರುವಂತೆ ಆಹ್ವಾನ‌ ನೀಡಿದ್ದು ,ಇದು ಕರ್ನಾಟಕದ ರಾಜ್ಯದಲ್ಲಿನ‌ ಆಧ್ಯಾತ್ಮಿಕ ಚಿಂತಕರಿಗೆ ಸಂಶೋಧನೊದ್ದೇಶವಾಗಿ ನೀಡಿರುವ ಪ್ರಥಮ‌ ಆಹ್ವಾನ ಎಂಬ ಕೀರ್ತಿ ಗುರೂಜಿ ಸಾಯಿ ಈಶ್ವರ್ ಅವರಿಗೆ ಸಲ್ಲಿದಂತಾಗಿದೆ.

ಸಾಯಿ ವಿದ್ಯಾ,ಸಾಯಿ ತುತ್ತು, ಪ್ರಾಣಿ ಪಕ್ಷಿಗಳ ಮೋಕ್ಷ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನ‌ ಮಾಡುವ ಮುಖಾಂತರ ಅಧ್ಯಾತ್ಮಿಕದ ವಿಚಾರದಲ್ಲೂ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದಾರೆ ಗುರೂಜಿ ಸಾಯಿ ಈಶ್ವರ್‌ ಎಂಬುದು ಹೆಗ್ಗಳಿಕೆಯ ವಿಷಯವಾಗಿದೆ.