ಗೋಮಾಂಸ ತಿನ್ನುವವರು, ನಾಯಿ ಮಾಂಸವನ್ನು ತಿನ್ನಲಿ : ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ -Vishwanews24

Featured, ರಾಷ್ಟ್ರ ನ್ಯೂಸ್

ಕೋಲ್ಕತ್ತ: ಗೋಮಾಂಸ ತಿನ್ನುವವರು ಅದನ್ನು ಮಾತ್ರವೇ ಏಕೆ, ನಾಯಿ ಮಾಂಸವನ್ನೂ ತಿನ್ನಲಿ ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿ ಸೋಮವಾರ ನಡೆದ ‘ಗೋ ಅಷ್ಟಮಿ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ‘ಕೆಲವು ಬುದ್ಧಿಜೀವಿಗಳು ರಸ್ತೆಯಲ್ಲಿ ಗೋಮಾಂಸ ತಿನ್ನುತ್ತಾರೆ. ಅಂತಹವರಿಗೆ ನಾಯಿ ಮಾಂಸವನ್ನೂ ತಿನ್ನಿ ಎಂದು ನಾನು ಹೇಳುತ್ತೇನೆ. ಅವರು ಯಾವುದೇ ಪ್ರಾಣಿಯ ಮಾಂಸ ತಿನ್ನಲಿ, ಅವರ ಆರೋಗ್ಯ ಚೆನ್ನಾಗಿರಲಿ. ಆದರೆ ರಸ್ತೆಯಲ್ಲೇಕೆ ತಿನ್ನಬೇಕು? ಅವರವರ ಮನೆಯಲ್ಲಿ ತಿನ್ನಲಿ’ ಎಂದು ಹೇಳಿದ್ದಾರೆ.

ಹಸು ನಮ್ಮ ತಾಯಿ. ನಾವು ಹಸುವಿನ ಹಾಲನ್ನು ಸೇವಿಸುವುದರ ಮೂಲಕ ಬದುಕುಳಿಡಿದ್ದೇನೆ, ಆದ್ದರಿಂದ ಯಾರಾದರೂ ನನ್ನ ತಾಯಿಯನ್ನು ನಿಂದಿಸಿದರೆ, ಅವರಿಗೆ ಏನು ಮಾಡಬೇಕು, ಅದನ್ನು ನಾನು ಮಾಡಿಯೇ ತೀರುತ್ತೇನೆ. ಭಾರತದ ಈ ಪುಣ್ಯ ಭೂಮಿಯಲ್ಲಿ ಹಸುವನ್ನು ಕೊಳ್ಳುವುದು ಮತ್ತು ಬೀಫ್ ಸೇವನೆ ಮಾಡುವುದು ಪಾಪ ಎಂದು ಹೇಳಿದ್ದಾರೆ.

ಹೇಳಿಕೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ನಾಯಕರು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಟಿಎಂಸಿ ಶಾಸಕಿ ನಿರ್ಮಲ್ ಘೋಷ್ ಆರೋಪಿಸಿದ್ದಾರೆ.