ಗೋಮಾಂಸ ಸೇವೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ : ಬಾಬಾ ರಾಮದೇವ್ -Vishwanews24
ಉಡುಪಿ : ಗೋಮಾಂಸದ ಬದಲು ಕತ್ತೆ, ನಾಯಿ, ಕೋಣದ ಮಾಂಸವನ್ನು ಬೇಕಾದರೂ ತಿನ್ನಿ. ಗೋಮಾಂಸ ಸೇವನೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂದು ಬಾಬಾ ರಾಮದೇವ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಉಡುಪಿಯಲ್ಲಿ ನಡೆದ ಸಂತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಬಾಬಾ ರಾಮದೇವ್, ಬಹುಜನ ಸಮಾಜವಾದಿ ಪಕ್ಷದವರು ತಮ್ಮನ್ನು ದೇಶದ ಮೂಲ ನಿವಾಸಿಗಳು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬ್ರಾಹ್ಮಣರು ಸೇರಿದಂತೆ ಇತರರು ವಿದೇಶಿ ಮೂಲದವರು ಎಂದು ನಿಂದಿಸುತ್ತಿದ್ದಾರೆ. ಭಾರದಲ್ಲಿರುವ ಪ್ರತಿಯೊಬ್ಬರೂ ದೇಶದ ಮೂಲ ನಿವಾಸಿಗಳು ಎಂಬ ಸತ್ಯವನ್ನು ಅರಿಯಬೇಕಿದೆ ಎಂದು ತಿರುಗೇಟು ನೀಡಿದರು.
ದೇಶದ ಜನಸಂಖ್ಯೆ ಮಿತಿಮೀರುತ್ತಿದೆ. ಮಿತಿ ಇಲ್ಲದೇ 8-10 ಮಕ್ಕಳನ್ನು ಮಾಡಿಕೊಳ್ಳುತ್ತಿದ್ದಾರೆ. ದೇಶ ಸಮೃದ್ಧವಾಗಿರಬೇಕಾದರೇ, ವಿಕಾಸದ ಹಾದಿಯಲ್ಲಿ ಸಾಗಬೇಕಾಗುತ್ತದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೆ ಬರಲಿ ಎಂದು ಒತ್ತಾಯಿಸಿದ ಅವರು, ಗೋಮಾಂಸ ಸೇವೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇದರ ಬದಲು ಕತ್ತೆ, ನಾಯಿ, ಕೋಣದ ಮಾಂಸವನ್ನು ಬೇಕಾದರೂ ತಿನ್ನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
