ಗೋವು ಕಳ್ಳರನ್ನು ಬಿಡುಗಡೆ ಮಾಡಲು ಸ್ಟೇಷನ್ ಗೆ ಮೊದಲು ಕರೆ ಬರುವುದು ಲಾಲಾಜಿಯದ್ದು : ಸೊರಕೆ ಗಂಭೀರ ಆರೋಪ

Featured, ಉಡುಪಿ

ಗೋವು ಕಳ್ಳರನ್ನು ಬಿಡುಗಡೆ ಮಾಡಲು ಸ್ಟೇಷನ್ ಗೆ ಮೊದಲು ಕರೆ ಬರುವುದು ಲಾಲಾಜಿಯದ್ದು : ಸೊರಕೆ ಗಂಭೀರ ಆರೋಪ

ಕಾಪು: ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ವಿರುದ್ಧ ಮಾಜಿ ಸಚಿವರಾದಂತಹ ವಿನಯ್ ಕುಮಾರ್ ಸೊರಕೆಯವರು ಪತ್ರಿಕಾಗೋಷ್ಠಿ ನಡೆಸಿ ಇಂದು ವಾಗ್ದಾಳಿ ನಡೆಸಿದರು.


ಪುರುಷಾರ್ಥದ ಬಗ್ಗೆ ಮಾತನಾಡುವ ಲಾಲಾಜಿಯ ಗುಟ್ಟು ಗೋಕಳ್ಳರಿಗೆ ಬೆಂಬಲ ಮಾಡುವುದರಲ್ಲಿ ಅಡಗಿದೆ,ಇಡೀ ವಿಧಾನ ಸಭಾ ಕ್ಷೇತ್ರದಲ್ಲಿ ಯಾವುದೇ ಗೋಕಳ್ಳತನದ ಪ್ರಕರಣ ನಡೆದಾಗ ಪೊಲೀಸ್ ಸ್ಟೇಷನ್ ಗೆ ಕರೆಮಾಡಿ ಆರೋಪಿಗಳನ್ನು ಬಿಡಿಸಲು ಒತ್ತಡ ಹಾಕುವುದರಲ್ಲಿ ಕಾಪು ಶಾಸಕ ಲಾಲಾಜಿ‌ ಮೆಂಡನ್ ಪಾತ್ರ ದೊಡ್ಡದಿದೆ ಆದರೇ ಆರೋಪ ಮಾತ್ರ ಕಾಂಗ್ರೆಸ್ ಮೇಲೆ ಎಂದು ಅವರು ಹೇಳಿದರು.


ಖುದ್ದಾಗಿ ಪೊಲೀಸ್ ಅಧಿಕಾರಿಗಳೇ ನನ್ನ ಬಳಿ ಈ ವಿಚಾರ ಹಂಚಿಕೊಂಡಿದ್ದಾರೆ ಆರೋಪಿಗಳ‌ ಪರ ಬ್ಯಾಟಿಂಗ್ ನಡೆಸುವ ಶಾಸಕರಿಗೆ ಹಿಂದುತ್ವ -ಗೋವು ವಿಚಾರದಲ್ಲಿ ಮಾತಾಡುವ ನೈತಿಕತೆ ಇಲ್ಲ ಎಂದು ಸೊರಕೆ ಆರೋಪ ನಡೆಸಿದರು.

Leave a Reply