ಗೋಶಾಲೆಯಲ್ಲಿ ಗೋವಿನ ಸಗಣಿಯಿಂದ ತಯಾರಿಸಲಾಗುತ್ತಿದೆ ರಾಖಿ -Viashwanews24
ಉತ್ತರ ಪ್ರದೇಶ :ಗೋವಿನ ಸಗಣಿಯಿಂದ ಗೋಶಾಲೆಯೊಂದರಲ್ಲಿ ರಾಖಿ ತಯಾರಿಸಲಾಗುತ್ತಿದೆ. ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ರಾಖಿಗಳು ತಯಾರಾಗಿವೆ.
ಅನಿವಾಸಿ ಭಾರತೀಯರೊಬ್ಬರು ಇದರ ನೇತೃತ್ವ ವಹಿಸಿದ್ದು, ಇಂಡೋನೇಷ್ಯಾದಲ್ಲಿನ ತಮ್ಮ ಕೆಲಸ ತ್ಯಜಿಸಿ ಬಂದಿರುವ ಇವರು, ತನ್ನ ಪೋಷಕರಿಗೆ ಸಹಾಯ ಮಾಡುವುದರ ಜೊತೆಗೆ ಜೈವಿಕ ವಿಘಟನೀಯ ರಾಖಿಗಳನ್ನು ಮಾಡುವ ಕಸಬು ಶುರು ಮಾಡಿದ್ದಾರೆ.
ಅಲ್ಕಾ ಲಹೋಟಿ, ಮೊನ್ನೆ ನಡೆದ ಕುಂಭಮೇಳದಲ್ಲಿ ಈ ರಾಖಿಗಳನ್ನು ಪ್ರದರ್ಶಿಸಿದರು. ಇದಕ್ಕೆ ಹಲವು ಸಂತರು, ಗುರುಗಳು ಉತ್ತಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುಗಳು, ಸಂತರು ಹೇಳಿದಂತೆ ಜನಸಾಮಾನ್ಯರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ನಾನು ಇತರೆ ತಜ್ಞರನ್ನು ಸಂಪರ್ಕಿಸಿ, ಈ ವಿಚಾರ ಚರ್ಚಿಸಿದ್ದೇನೆ. ಇಲ್ಲಿಯ ತನಕ ಕರ್ನಾಟಕ, ಉತ್ತರ ಪ್ರದೇಶ, ಉತ್ತರಾ ಖಂಡ್, ಒಡಿಸ್ಸಾಗಳಿಂದ ಆರ್ಡರ್ ಗಳನ್ನು ಪಡೆದಿದ್ದೇನೆ.
ಮುಂಬರುವ ಹಬ್ಬಕ್ಕೆ ತಾನು ಸಾವಿರಾರು ರಾಖಿಗಳನ್ನು ಸಿದ್ದಪಡಿಸಿರುವುದಾಗಿ ಲಹೋಟಿ ಹೇಳಿದ್ದಾರೆ. ಅಲ್ಲದೇ ನಮ್ಮ ರಾಖಿಗಳು ಪರಿಸರ ಸ್ನೇಹಿಯಾಗಿದ್ದು, ಮುಂದೆ ಗೊಬ್ಬರವಾಗುತ್ತವೆ ಎಂದರು.
