ಗೋ ಬ್ಯಾಕ್​ ಶೋಭಾ ಅಭಿಯಾನ :  ಪೋಸ್ಟರ್​ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲು – Vishwanews24

Featured, ಉಡುಪಿ

ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನ :  ಪೋಸ್ಟರ್​ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲು

ಚಿಕ್ಕಮಗಳೂರು,:  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವರ್ಸಸ್ ಮಾಜಿ ಶಾಸಕ ಸಿ.ಟಿ ರವಿ  ನಡುವೆ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಟಿಕೆಟ್ ಫೈಟ್ ಜೋರಾಗಿದೆ. ಗೋ ಬ್ಯಾಕ್, ಶೋಭಾ ಹಾಠಾವೋ ಎಂದು ಸಿ,ಟಿ.ರವಿ ಬೆಂಬಲಿಗರು ಅಭಿಯಾನ ನಡೆಸಿದ್ದಾರೆ. ಸದ್ಯ ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನ ವಿಚಾರ ಸಂಬಂಧ ಪೋಸ್ಟರ್​ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲಾಗಿದೆ.

ಕಳೆದ ಜನವರಿ 01ರಿಂದ ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದ ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ದಂಗಲ್ ಆರಂಭ ಮಾಡಿದ್ದಾರೆ. ಶೋಭಾ ವಿರುದ್ಧ ಗೋ ಬ್ಯಾಕ್ ಶೋಭಾ ,ಶೋಭಾ ಹಠಾವೋ ಬಿಜೆಪಿ ಬಚಾವೋ ಅಭಿಯಾನ ನಡೆಯುತ್ತಿದೆ. ಟಿಕೆಟ್ ನೀಡದಂತೆ ಕ್ಯಾಂಪೇನ್ ನಡೆಸಲಾಗಿದೆ. ಇದು ಬಿಜೆಪಿ ಹೈ ಕಮಾಂಡ್ ಕೋಪಕ್ಕೂ ಕಾರಣವಾಗಿದೆ. ಇದೆಲ್ಲದರ ನಡುವೆ ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಅಭಿಯಾನ ವಿಚಾರ ಸಂಬಂಧ ಪೋಸ್ಟರ್​ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲಾಗಿದೆ. ಬಸವನಹಳ್ಳಿ ಪೊಲೀಸರಿಂದ ಪೋಸ್ಟರ್ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ದುಡ್ಡಿನ ದರ್ಪದಿಂದ, ಅಹಂಕಾರದಿಂದ ಗೋಬ್ಯಾಕ್ ಅಭಿಯಾನ ಮಾಡಿಸಿದ್ದಾರೆ : ಶೋಭಾ ಕರಂದ್ಲಾಜೆ – Vishwanews24

ಶೋಭಕ್ಕ ಎಲ್ಲಿದ್ದೀರ?, ಶೋಭಕ್ಕ ಕಾಣೆ ಎಂದು ತರೀಕೆರೆಯಿಂದ ಚಿಕ್ಕಮಗಳೂರುವರೆಗೂ ರಾತ್ರೋರಾತ್ರಿ ಪೋಸ್ಟರ್​​​ಗಳನ್ನು ಅಂಟಿಸಿದ್ದ ನಾಲ್ವರು ಯುವಕರಾದ ಸಂಜು, ಸಂಜಯ್, ವಿಷ್ಣು, ಚಂದ್ರಶೇಖರ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಯುವಕರು ತರೀಕೆರೆ ಮೂಲದವರು. ತರೀಕೆರೆ ಪಟ್ಟಣದಿಂದ ಚಿಕ್ಕಮಗಳೂರು ನಗರದ ವರೆಗೂ ಪೋಸ್ಟರ್ ಅಂಟಿಸಿದ್ದರು. ನಗರ ಸಭೆ ಪೌರ ಕಾರ್ಮಿಕ ನೀಡಿದ ದೂರಿನ ಮೇರೆಗೆ ಎಫ್​ಐಆರ್ ದಾಖಲಾಗಿದೆ. ಇನ್ನು ಯುವಕರು ಹಣ ನೀಡಿ ಪೋಸ್ಟರ್ ಅಂಟಿಸಲು ಹೇಳಿದ್ರು ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಬಸವನಹಳ್ಳಿ ಪೊಲೀಸರು ಪೋಸ್ಟರ್ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಬಟ್ಟೆ ಸ್ವಚ್ಛವಾಗಿಲ್ಲ ಎಂದು ಮೆಟ್ರೋದೊಳಗೆ ಬಿಡದ ಸಿಬ್ಬಂದಿ  – Vishwanews24

Leave a Reply