ಗ್ರಾ. ಪ ಚುನಾವಣೆಯಲ್ಲಿ ಯುವಕರಿಗೆ ಶೇ 50% ಅವಕಾಶ ನೀಡಿ : ಜಿಲ್ಲಾ ಯುವ ಕಾಂಗ್ರೇಸ್ ಮನವಿ -Vishwanews24
ಗ್ರಾ. ಪ ಚುನಾವಣೆಯಲ್ಲಿ ಯುವಕರಿಗೆ ಶೇ 50% ಅವಕಾಶ ನೀಡಿ : ಜಿಲ್ಲಾ ಯುವ ಕಾಂಗ್ರೇಸ್ ಮನವಿ -Vishwanews24
ಉಡುಪಿ:ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯುವಕರಿಗೆ ಶೇ 50% ಅವಕಾಶ ನೀಡಬೇಕಾಗಿ ವಿನಂತಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷರಾದ ವಿಶ್ವಾಸ್ ವಿ ಅಮೀನ್ ನೇತ್ರತ್ವದಲ್ಲಿ ಉಡುಪಿ ಜಿಲ್ಲಾ ಕಾಂಗ್ರೇಸ್ ಕಾಂಗ್ರೇಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ರವರಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ನಿಯೋಗದಲ್ಲಿ ಜಿಲ್ಲಾ ಯುವ ಕಾಂಗ್ರೇಸ್ ಸಾಮಾಜಿಕ ಜಾಲತಾಣ ಸಂಯೋಜಕರಾದ ಯೋಗೀಶ್ ಆಚಾರ್ಯ ಇನ್ನ, ಸಹ ಸಂಯೋಜಕರಾದ, ಪ್ರದೀಪ್ ಶೆಟ್ಟಿ ನಲ್ಲೂರು, ಕಾರ್ಕಳ ಯುವ ಕಾಂಗ್ರೇಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್ ಇನ್ನ, ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ನವೀನ್ ಪ್ರಸಿದ್ದಿ , ಪ್ರಶಾಂತ್ ಹೆಗ್ಡೆ, ಶ್ಯಾಮ್, ಆಕಾಶ್ ಪೂಜಾರಿ, ಪ್ರಭಾಕರ್ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರು ನವೀನಚಂದ್ರ ಜೆ ಶೆಟ್ಟಿ,ಜಿಲ್ಲಾ ಕಾಂಗ್ರೇಸ್ ನಾಯಕರುಗಳಾದ ಪ್ರಶಾಂತ್ ಜತ್ತನ್ನ, ಅಣ್ಣಯ್ಯ ಶೇರಿಗಾರ್, ಹರೀಶ್ ಶೆಟ್ಟಿ, ಜ್ಯೋತಿ ಹೆಬ್ಬಾರ್ ಉಪಸ್ಥಿತರಿದ್ದರು.
