ಚಿತ್ರಮಂದಿರಗಳಲ್ಲಿ ಹಾಡಿಸುವ ರಾಷ್ಟ್ರಗೀತೆಗಿಂತ ಸಿನಿಮಾಗಳಲ್ಲಿ ರಾಷ್ಟ್ರೀಯತೆ ಇರಬೇಕು : ವಿದ್ಯಾ ಬಾಲನ್ -Vishwanews24
”ಭಾರತೀಯರು ತಮ್ಮ ದೇಶದ ಬಗ್ಗೆ ಹೆಮ್ಮೆ ಪಡುವ ಅನೇಕ ವಿಷಯಗಳು ಇವೆ. ಆದರೆ, ನಾವು ಅದನ್ನು ಮಾಡುವುದೇ ಇಲ್ಲ.” ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ‘ಮಿಷನ್ ಮಂಗಲ್’ ನಾಯಕಿ ‘ರಾಷ್ಟ್ರೀಯತೆ ಮತ್ತು ಸಿನಿಮಾ’ ಬಗ್ಗೆ ಹೇಳಿಕೆ ನೀಡಿದ್ದಾರೆ. ”ರಾಷ್ಟ್ರೀಯತೆ ಸಿನಿಮಾದಲ್ಲಿ ಇರಲಿ ಆದರೆ, ಚಿತ್ರಮಂದಿರದಲ್ಲಿ ಬೇಡ.” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಿತ್ರಮಂದಿರಗಳಲ್ಲಿ ಹಾಡಿಸುವ ರಾಷ್ಟ್ರಗೀತೆಗಿಂತ ಸಿನಿಮಾಗಳಲ್ಲಿ ರಾಷ್ಟ್ರೀಯತೆ ಇರಬೇಕು ಎನ್ನುವುದು ವಿದ್ಯಾ ಬಾಲನ್ ಮಾತಿನ ಅರ್ಥವಾಗಿದೆ. ”ವಿಶ್ವವನ್ನು ಸುತ್ತಿ ಬಂದರೆ, ಭಾರತೀಯರು ಹೆಮ್ಮೆ ಪಡುವ ಅನೇಕ ವಿಷಯಗಳು ನಮ್ಮಲ್ಲಿ ಇವೆ. ಇಲ್ಲಿನ ವೈವಿದ್ಯತೆ, ಪರಂಪರೆ ಹಾಗೂ ನೈಸರ್ಗಿಕ ಸೌಂದರ್ಯದಲ್ಲಿ ಭಾರತ ಶ್ರೀಮಂತವಾಗಿದೆ. ನಾವು ನಮ್ಮ ದೇಶವನ್ನು ಸಂಭ್ರಮಿಸಬೇಕು” ಎನ್ನುವುದು ವಿದ್ಯಾ ಮಾತು.
ವಿಜ್ಞಾನ ಮತ್ತು ಧರ್ಮ ಸಹಬಾಳ್ವೆ ನಡೆಸಬಹುದು, ಅವು ಬೇರೆ ಬೇರೆ ಆಗುವ ಅಗತ್ಯ ಇಲ್ಲ. ”ಇಂದಿನ ದಿನದಲ್ಲಿ ಧರ್ಮವನ್ನು ವ್ಯಾಖ್ಯಾನಿಸಿರುವ ರೀತಿಯಲ್ಲಿ ಸಮಸ್ಯೆ ಇದೆ. ಎಷ್ಟೋ ಜನರು ತಾವು ಧಾರ್ಮಿಕರು ಎಂದು ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ನಾನು ಕೂಡ ಅದರಲ್ಲಿ ಒಬ್ಬಳು.” ಎಂದು ವಿದ್ಯಾ ತಿಳಿಸಿದ್ದಾರೆ.
