ಚಿದಂಬರಂ ಮತ್ತು ಕಾಂಗ್ರೆಸ್ ಪಕ್ಷದ ಇಮೇಜ್ ಅನ್ನು ಹಾಳು ಮಾಡಲು ಈ ರೀತಿ ಮಾಡಲಾಗಿದೆ : ಪುತ್ರ ಕಾರ್ತಿ ಚಿದಂಬರಂ -Vishwanews24
ನವದೆಹಲಿ:ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಅವರನ್ನು ಬುಧವಾರ ರಾತ್ರಿ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪುತ್ರ ಕಾರ್ತಿ ಚಿದಂಬರಂ, ಇದು ಯಾರದೋ ಪ್ರತಿಕಾರಕ್ಕಾಗಿ ತನಿಖಾ ಸಂಸ್ಥೆಗಳು ನಾಟಕ ಮಾಡುತ್ತಿದೆ. ಅವರ ಹೆಸರಲ್ಲಿ ಯಾವುದೇ ಚಾರ್ಜ್ ಶೀಟ್ ದಾಖಲಾಗಿಲ್ಲ. ಚಿದಂಬರಂ ಮತ್ತು ಕಾಂಗ್ರೆಸ್ ಪಕ್ಷದ ಇಮೇಜ್ ಅನ್ನು ಹಾಳು ಮಾಡಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ಪ್ರಕರಣ ದಾಖಲಿಸಲಾಗಿದೆ. ನನ್ನ ಮೇಲೆ ಸಿಬಿಐ ನಾಲ್ಕು ಬಾರಿ ದಾಳಿ ಮಾಡಿದೆ. ಈವರೆಗೆ ಯಾರ ಮೇಲೂ ಇಷ್ಟು ದಾಳಿ ನಡೆದಿಲ್ಲ. ಇಪ್ಪತ್ತು ಬಾರಿ ವಿಚಾರಣೆಗೆ ಹಾಜರಾಗಿದ್ದೇನೆ. ಪ್ರತಿಬಾರಿ ಹತ್ತು ಗಂಟೆ ವಿಚಾರಣೆ ನಡೆಸುತ್ತಾರೆ ಎಂದು ದೂರಿದರು.
ಜಾಹಿರಾತು
ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಅವರನ್ನು ಬಂಧನ ಮಾಡಿರುವವರ ವಿರುದ್ಧ ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಟ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




