ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ , ಮುಂಬರುವ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ : ಸಿದ್ದರಾಮಯ್ಯ – Vishwanews24

Featured, ರಾಜ್ಯ ನ್ಯೂಸ್

ಚುನಾವಣಾ ರಾಜಕಾರಣದಿಂದ ನಾನು ನಿವೃತ್ತಿ ಪಡೆಯುತ್ತೇನೆ..

ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ..

ಮುಂಬರುವ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ..

ಮೈಸೂರು: ಚುನಾವಣಾ ರಾಜಕಾರಣದಿಂದ ನಾನು ನಿವೃತ್ತಿ ಪಡೆಯುತ್ತೇನೆ. ಆದರೆ ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆ ಗೆ ಬಹಳಷ್ಟು ಕ್ಷೇತ್ರದ ನಾಯಕರು ತಮ್ಮಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ.

ನಾನು ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಿರ್ಧರಿಸಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಈಗಲೇ ಈ ಬಗ್ಗೆ ತೀರ್ಮಾನ ಮಾಡುವುದಿಲ್ಲ ಎಂದರು.

ವರುಣಾ, ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಿಂದಲೂ ಒತ್ತಡವಿದೆ. ರಾಜಕೀಯ ಜನ್ಮಕೊಟ್ಟ ಚಾಮುಂಡೇಶ್ವರಿ ಕ್ಷೇತ್ರದ ಜನರೇ ನನ್ನನ್ನು ಸೋಲಿಸಿದರು. ಅವರು ನನ್ನ ಸೋಲಿಸಿದರೆಂದು ನಾನು ಅವರನ್ನು ದ್ವೇಷಿಸಲ್ಲ. ಈಗ ಅವರೇ ಮತ್ತೆ ಸ್ಪರ್ಧೆಗೆ ಕರೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮುಸ್ಲಿಂ ವಿಸ್ತಾರವಾದ ಮತ್ತು ಪ್ರತ್ಯೇಕವಾದ ದೇಶಕ್ಕೆ ಮಾರಕ ಮತ್ತು ಗಂಡಾಂತರ : ಪ್ರಮೋದ್ ಮುತಾಲಿಕ್ – Vishwanews24

Leave a Reply