ಚೈತ್ರಾ ಕುಂದಾಪುರ ವಿರುದ್ದ ಮತ್ತೊಂದು 420 ಪ್ರಕರಣ ದಾಖಲು : ಬಟ್ಟೆಯಂಗಡಿ ಮಾಡಿಕೊಡುವುದಾಗಿ ವಂಚಿಸಿ ಐದು ಲಕ್ಷ ಪಂಗನಾಮ : vishwanews24

Featured, ರಾಜ್ಯ ನ್ಯೂಸ್

ಚೈತ್ರಾ ಕುಂದಾಪುರ ವಿರುದ್ದ ಮತ್ತೊಂದು 420 ಪ್ರಕರಣ ದಾಖಲು : ಬಟ್ಟೆಯಂಗಡಿ ಮಾಡಿಕೊಡುವುದಾಗಿ ವಂಚಿಸಿ ಐದು ಲಕ್ಷ ಪಂಗನಾಮ
ಉಡುಪಿ

ಚೈತ್ರ ಕುಂದಾಪುರ ವಿರುದ್ದ ಮತ್ತೊಂದು ವಂಚನೆ ಪ್ರಕರಣ ಬಯಲು

ಕೋಟ ಪೊಲೀಸ್ ಠಾಣೆಯಲ್ಲಿ ಚೈತ್ರ ವಿರುದ್ದ ದೂರು ದಾಖಲು

ಸುದೀನ ಎಂಬ ಯುವಕನಿಂದ ದೂರು ದಾಖಲು

ವೃತ್ತಿಯಲ್ಲಿ ಮೀನುಗಾರನಾಗಿರುವ ಬ್ರಹ್ಮಾವರ ನಿವಾಸಿ ಸುದೀನ

ಬಟ್ಟೆ ಅಂಗಡಿ ಹಾಕಿಕೊಡುತ್ತೇನೆಂದು ಐದು ಲಕ್ಷ ರೂಪಾಯಿ ವಂಚನೆ

2015ರಲ್ಲಿ ಸುದೀನ ಅವರಿಗೆ ಪರಿಚಯವಾಗಿದ್ದ ಚೈತ್ರ ಕುಂದಾಪುರ

ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ನಂಬಿಸಿದ್ದ ಚೈತ್ರ

2018-2023 ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಂತ ಹಂತವಾಗಿ ಪಡೆದ ಚೈತ್ರ ಕುಂದಾಪುರ

ಮೂರು ಲಕ್ಷವನ್ನ ಚೈತ್ರ ಖಾತೆಗೆ ವರ್ಗಾಯಿಸಿದ್ದ ಸುದೀನ

ಉಳಿದ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ನೀಡಿದ್ದ ಸುದೀನ

ಕೋಟ ಗ್ರಾಮದಲ್ಲಿ ಬಟ್ಟೆ ಅಂಗಡಿ ಹೆಸರಲ್ಲಿ ವಂಚನೆ ಮಾಡಿದ ಚೈತ್ರ ಕುಂದಾಪುರ

ಬಟ್ಟೆ ಅಂಗಡಿಗೆ ಹಣ ಪಡೆದು ನಿರ್ಮಾಣ ವಿಳಂಬವಾದಾಗ ಇನ್ನಷ ಹಣದ ಬೇಡಿಕೆ ಇಟ್ಡ ವಂಚಕಿ ಚೈತ್ರ

ಅಂಗಡಿ ನಿರ್ಮಣ ವಿಳಂಬವಾಗಿರುವುದಕ್ಕೆ ಸ್ಥಳೀಯ ಮುಖಂಡರಲ್ಲಿ ಮತುಕತೆ ನಡೆಸಿದ್ದ ಅಂತಿಮ ಹಂತ ಎಂದು ನಂಬಿಸಿದ್ದ ಚೈತ್ರ

ಕೊನೆಗೆ ಚುನಾವಣಾ ಪ್ರಚಾರ, ಭಾಷಣ, ಕಾರ್ಯ ಕಾರಣಿ ಸಭೆ, ಪಕ್ಷದ ಮುಖಂಡರ ಭೇಟಿ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ವಂಚಕಿ ಚೈತ್ರ

ಅನುಮಾನಗೊಂಡ ಸುದೀನ ಕೂಡಲೇ ಬಟ್ಟೆ ಅಂಗಡಿಗೆ ಒತ್ತಾಯಿಸಿದ ಕೂಡಲೇ ಬೆದರಿಕೆ

ಸುಳ್ಳು ಅತ್ಯಾಚಾರ ಪ್ರಕರಣ ಕೊಡುತ್ತೇನೆ, ಬಾಡಿಗೆ ಗೂಂಡಾಗಳಿಂದ ಕೊಲೆ‌ ಮಾಡಿಸುವುದಾಗಿ ಬೆದರಿಕೆ

ಹಲವರ ಮನವೊಲಿಕೆ ಬಳಿಕ‌ ಇದೀಗ ದೂರನ್ನ ನೀಡಿರುವ ಸುದೀನ

ಚೈತ್ರ ವಿರುದ್ದ 506, 417, 420 ಐಪಿಸಿ‌ ಸೆಕ್ಷನ್ ಅಡಿ ಎಫ್ ಐಅರ್ 

Leave a Reply