ಜಗತ್ತಿನಲ್ಲೇ ಕೋಪ ಮಾಡಿಕೊಳ್ಳದ ವ್ಯಕ್ತಿ ಒಬ್ಬರಿದ್ದಾರೆ ಅಂದ್ರೇ, ಅವ್ರು ಕುಮಾರಸ್ವಾಮಿ ಮಾತ್ರ: ಶಿವರಾಮೇಗೌಡ -Vishwanews24

Featured, ಉಡುಪಿ

ಉಡುಪಿ : ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ಕೋಪಾನೇ ಬರೋದಿಲ್ಲ. ಅವರು ಜಗತ್ತಿನಲ್ಲೇ ಕೋಪ ಮಾಡಿಕೊಳ್ಳದ ವ್ಯಕ್ತಿಯಾಗಿದ್ದಾರೆ ಎಂದು ಸಂಸದ ಎಲ್ ಆರ್ ಶಿವರಾಮೇಗೌಡ ಹೇಳಿದ್ದಾರೆ.

ಉಡುಪಿಯಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಸಿಎಂ ಕುಮಾರಸ್ವಾಮಿ ಅವರನ್ನು ಮಾತನಡಾದಿಸಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಂಡ್ಯ ಸಂಸದ ಎಲ್ ಆರ್ ಶಿವರಾಮೇಗೌಡ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ಆರೋಗ್ಯ ವಿಚಾರಿಸಲು ಬಂದಿದ್ದೆ. ಇಬ್ಬರನ್ನೂ ಮಾತಾನಾಡಿಸಿದ್ದೇನೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಮುಖ್ಯಮಂತ್ರಿಗಳು ಮಾಧ್ಯಮಗಳ ಮೇಲೆ ಕೋಪ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಉತ್ತರಿಸಿದ ಎಲ್ ಆರ್ ಶಿವರಾಮೇಗೌಡ, ಮಾಧ್ಯಮಗಳ ಮೇಲೆ ಸಿಎಂ ಕೋಪ ಮಾಡಿಕೊಂಡಿಲ್ಲ. ಇದೆಲ್ಲಾ ಸುಳ್ಳು ಆರೋಪ. ಜಗತ್ತಿನಲ್ಲೇ ಕೋಪ ಮಾಡಿಕೊಳ್ಳದ ವ್ಯಕ್ತಿ ಒಬ್ಬರಿದ್ದಾರೆ ಅಂದ್ರೇ, ಅವ್ರು ಕುಮಾರಸ್ವಾಮಿ ಮಾತ್ರ ಎಂದರು.

ಇನ್ನೂ ಹೆಚ್ ಟಿ ಎಂ ಕ್ಷೇತ್ರದ ಬಗ್ಗೆ ನೋಟ ಟೆಕ್ಷನ್, ರಿಸಲ್ಟ್ ಬಂದಾಗ ನಿಮಗೆ ಗೊತ್ತಾಗಲಿದೆ. ಆಗ ಮಾತನಾಡಲಿದ್ದೇನೆ. ಈಗ ಅದಲೆಲ್ಲಾ ಬೇಡ ಎಂದು ಹೇಳಿ ತೆರಳಿದರು.