ಜನರು ತಾವೇ ನಿಬಂಧನೆ ಹಾಕಿಕೊಂಡರೆ ಲಾಕ್ ಡೌನ್ ಅವಶ್ಯಕತೆಯಿಲ್ಲ: ಸಚಿವ ಸುಧಾಕರ್ -Vishwanews24
ಜನರು ತಾವೇ ನಿಬಂಧನೆ ಹಾಕಿಕೊಂಡರೆ ಲಾಕ್ ಡೌನ್ ಅವಶ್ಯಕತೆಯಿಲ್ಲ: ಸಚಿವ ಸುಧಾಕರ್ -Vishwanews24
ಬೆಂಗಳೂರು: ಜನರು ಅನಗತ್ಯವಾಗಿ ಸೇರುವುದು ಬಿಡಬೇಕು. ನಾವೇ ನಿಬಂಧನೆ ಹಾಕಿಕೊಂಡರೆ ಲಾಕ್ ಡೌನ್ ಮಾಡುವ ಅವಶ್ಯಕತೆಯಿಲ್ಲ. ಸರ್ಕಾರ ಏನೆಲ್ಲ ಮಾಡಬೇಕು, ಪೂರ್ವಯೋಜಿತವಾಗಿ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಮಾಡುತ್ತೇವೆಂದು ಸಿಎಂ ಆಗಲಿ, ನಾನಾಗಲಿ ಹೇಳಿಲ್ಲ. ಲಾಕ್ ಡೌನ್ ಮಾಡಲು ನಮಗೆ ಸುತಾರಾಂ ಇಷ್ಟ ಇಲ್ಲ. ಲಾಕ್ ಡೌನ್ನಿಂದ ಎಷ್ಟು ಆರ್ಥಿಕ ಕಷ್ಟ ಇದೆ ಎನ್ನುವುದು ಗೊತ್ತಿದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು.
ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೇಲಿದ್ದ ಚೆಕ್ ಬೌನ್ಸ್ ಪ್ರಕರಣ ಹಿಂಪಡೆಯಲು ನಿರ್ಧಾರ -Vishwanews24
ಈಗ ಫನಾ ಅಸೋಸಿಯೇಷನ್ ಜೊತೆ ವಿಡಿಯೋ ಸಂವಾದ ಮಾಡಿದ್ದೇನೆ. ಕೋವಿಡ್ ಸಂಖ್ಯೆ ದಿನನಿತ್ಯ ಹೆಚ್ಚುತ್ತಿದೆ. ನಾನ್ ಕೋವಿಡ್ ಇದ್ದರೂ ತುರ್ತು ಪರಿಸ್ಥಿತಿ ಇರುವುದಿಲ್ಲ. ನಾನ್ ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿಡಲು ಮನವಿ ಮಾಡಿದ್ದೇವೆ. ಒಂದು ವಾರದ ಒಳಗೆ ಶೇ.50 ರಷ್ಟು ಹಾಸಿಗೆ ಕೊಡಲು ಒಪ್ಪಿದ್ದಾರೆ. ಅಲ್ಪ ರೋಗದ ಲಕ್ಷಣ ಅಥವಾ ಯಾವುದೇ ರೋಗದ ಲಕ್ಷಣ ಇಲ್ಲದವರು ಆಸ್ಪತ್ರೆಯಲ್ಲಿ ಇರಬೇಕು ಎಂದರು.
ಇಡೀ ದೇಶದಲ್ಲಿ ಚಿಕಿತ್ಸೆಗೆ ರೆಮಿಡಿಸೀವರ್ ಅವಶ್ಯಕತೆ ಇದೆ. ಅದರ ತಯಾರಿಕೆ ಕಡಿಮೆಯಾಗಿದೆ. ರಾಜ್ಯದಲ್ಲಿ ರೆಮಿಡಿಸೀವರ್ ಲಭ್ಯತೆ ಇದೆ. ಆದರೆ ಖಾಸಗಿ ಆಸ್ಪತ್ರೆಯವರು ಇಲ್ಲ ಅಂತ ಹೇಳಿದ್ದಾರೆ. ಎಷ್ಟು ಬೇಕಿದೆಯೆಂದು ಖಾಸಗಿ ಆಸ್ಪತ್ರೆಯಿಂದ ಲೆಕ್ಕ ಪಡೆಯಲಾಗುವುದು. ಸರ್ಕಾರದಿಂದ ನಾವು ಪಡೆದ ದರದಲ್ಲೇ, ಅವರಿಗೆ ಪೂರೈಸುತ್ತೇವೆ ಎಂದರು.
ಸರ್ಕಾರ ಬಿಗಿ ಕ್ರಮ ಕೈಗೊಳ್ಳದಿದ್ದಕ್ಕೆ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗಿವೆ: ಸಿದ್ದರಾಮಯ್ಯ -Vishwanews24
