ಜನವರಿ 9ರಂದು ಮಂಗಳೂರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ – Vishwanews24
ಜನವರಿ 9ರಂದು ಮಂಗಳೂರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ – Vishwanews24
ಮಂಗಳೂರು: ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 2022ರ ಜನವರಿ 9ರಂದು ಮಂಗಳೂರಿಗೆ ಭೇಟಿ ನೀಡಲಿದ್ದು, ಈ ಸಂದರ್ಭ ಅವರು ವಿವಿಧ ಮಹತ್ವದಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-169 ಚತುಷ್ಪಥ ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಎನ್‌ಹೆಚ್-75ರ ಷಟ್ಪಥ ಕಲ್ಲಡ್ಕ ಫ್ಲೈ ಓವರ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
“ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಅಡ್ಡಹೊಳೆಯಿಂದ – ಪೆರಿಯಶಾಂತಿ ಹಾಗೂ ಪೆರಿಯಶಾಂತಿ – ಬಂಟ್ವಾಳ ಕ್ರಾಸ್ ನಡುವಿನ ಎರಡು ಪ್ಯಾಕೇಜ್‌ನ ಕಾಮಗಾರಿಗಳಿಗೂ ಸಹ ಪುನರ್ ಚಾಲನೆ ನೀಡಲಿದ್ದಾರೆ” ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
2023ರಲ್ಲಿ ಅಧಿಕಾರಕ್ಕೆ ಬಾರದಿದ್ದಲ್ಲಿ ಜೆಡಿಎಸ್ ಪಕ್ಷವನ್ನೇ ಮುಚ್ಚುತ್ತೇವೆ : ಹೆಚ್‌ಡಿಕೆ – Vishwanews24
