ಜಾತ್ಯತೀತ ಜನಾತದಳ(ಜೆಡಿಎಸ್)ನ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಬಾಲಾಜಿ ಇವರ ವತಿಯಿಂದ ದಿನಾಂಕ 20 ರಂದು ಸೋಮವಾರ ಸುಮಾರು 250 ಕ್ಕೂ ಅಧಿಕ ಕುಟುಂಬಗಳಿಗೆ ಆಹಾರದ ದಿನಸಿ ಕಿಟ್ ವಿತರಣೆಗೆ ತಯಾರಿ; video news vishwanews24

Featured, ಉಡುಪಿ

ಜಾತ್ಯತೀತ ಜನಾತದಳ(ಜೆಡಿಎಸ್)ನ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಬಾಲಾಜಿ ಇವರ ವತಿಯಿಂದ ದಿನಾಂಕ ೨೦ ರಂದು ಸೋಮವಾರ ಸುಮಾರು 250 ಕ್ಕೂ ಅಧಿಕ ಕುಟುಂಬಗಳಿಗೆ ಆಹಾರದದಿನಸಿ

 ಕಿಟ್ ವಿತರಣೆಗೆ ತಯಾರಿ

Kaup: ಜಾತ್ಯತೀತ ಜನಾತದಳ(ಜೆಡಿಎಸ್)ನ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಬಾಲಾಜಿ ಇವರ ವತಿಯಿಂದ ದಿನಾಂಕ ೨೦ ರಂದು ಸೋಮವಾರ ಸುಮಾರು ೨೫೦ ಕ್ಕೂ ಅಧಿಕ ಕುಟುಂಬಗಳಿಗೆ ಆಹಾರದ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮದ ಅಂಗವಾಗಿ ಇಂದು ಜೋಡನೆ ಮಾಡುವ ಕಾರ್ಯ ನಡೆಯಿತು.

ಸೋಮವಾರ ಬೆಳಗ್ಗೆ ಉಡುಪಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಾಂಕೇತಿಕವಾಗಿ ವಿತರಿಸಿ ತದನಂತೆ ಈಗಾಗಲೇ ಗುರುತಿಸಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಮುಟ್ಟಿಸುವ ಕಾರ್ಯ ನಡೆಯಲಿದೆ.

ಈ ಬಗ್ಗೆ ಮಾತಾಡಿದ ಅವರು” ವಿಶ್ವಕ್ಕೆ ಆವರಿಸಿರುವ ಕಂಟಕ ಕೊರೋನಾ ಇದರಿಂದಾಗಿ ಭಾರತ ಲಾಕ್-ಡೌನ್ ಆಗಿದೆ ಹಾಗಾಗಿ ಜನ ಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದ್ದು ಈ ಬಗ್ಗೆ ಚಿಂತಿಸಿ ಜೆಡಿಎಸ್ ಪಕ್ಷದ ಹೆಸರಿನಲ್ಲಿ ವೈಯಕ್ತಿಕವಾಗಿ ಈಗಾಗಲೇ ಗುರುತಿಸಿರುವ ಬಡ ಮಧ್ಯಮ ಕುಟುಂಬಗಳ ಮನೆಗೆ ನೇರವಾಗಿ ಮುಟ್ಟಿಸಲು ಕಿಟ್ ತಯಾರು ಮಾಡಿದ್ದೇವೆ ಸುಮಾರು ೨೫೦ ಕ್ಕೂ ಅಧಿಕ ಕುಟುಂಬಗಳಿಗೆ ಈ ಕಿಟ್ ತಲುಪಲಿದೆ ಎಂದರು,ಇದೇ ಸಂಧರ್ಭದಲ್ಲಿ ಕೊರೋನಾ ವಿರುದ್ಧ ಸೇವೆ ಮಾಡುತ್ತಿರುವ ಉಡುಪಿ ಜಿಲ್ಲಾಡಳಿತ, ಪೋಲಿಸ್ ಇಲಾಖೆ, ವೈದ್ಯರು,ಸೇರಿದಂತೆ ಎಲ್ಲಾರಿಗೂ ಕೃತಜ್ಞತೆ ಸಲ್ಲಿಸಿದರು.”ಈ ಸಂಧರ್ಭದಲ್ಲಿ ಪಕ್ಷದ ಮುಖಂಡರಾದ ಜಯರಾಮ್ ಆಚಾರ್ಯ ಉಪಸ್ಥಿತರಿದ್ದರು.

facebook news video

youtube video news