ಜಾರಕಿಹೊಳಿ ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ , ಅವರು ಏನು ತಪ್ಪು ಮಾಡಿಲ್ಲ : ಡಿಕೆಶಿ – vishwanews24
ಬಿಜೆಪಿ ಕಾಂಗ್ರೆಸ್ ಪಾರ್ಟಿನ ಟ್ರ್ಯಾಪ್ ಮಾಡೋದಕ್ಕೆ ತಯಾರಿ ಮಾಡ್ತಿದ್ದಾರೆ ..
ಬಿಜೆಪಿಯವರ ಮೇಲೆಲ್ಲೂ ಕೂಡ ED ದಾಳಿ ಮಾಡುತ್ತಿಲ್ಲ
ವಂದೇ ಮಾತರಂ ಬಗ್ಗೆ ನಮ್ಮ ಪಕ್ಷದ ಸ್ಟ್ಯಾಂಡ್ ಸ್ಪಷ್ಟವಾಗಿದೆ : ಡಿಕೆಶಿ
ಬೆಂಗಳೂರು: ಸತೀಶ್ ಜಾರಕಿಹೊಳಿ ಅವರು ಏನು ತಪ್ಪು ಮಾಡಿಲ್ಲ, ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಅವರು ನನ್ನ ಸಹೋದ್ಯೋಗಿ. ಅವರು ಏನು ತಪ್ಪು ಮಾಡಿಲ್ಲ, ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ. ಹೊರಗಡೆ ಹೋಗಬಾರದು, ವ್ಯವಹಾರ ಮಾಡಬಾರದು ಅಂತ ಎಲ್ಲಿದೆ? ಇದೆಲ್ಲ ರಾಜಕಾರಣ. ಇನ್ನೂ ಮೂರ್ನಾಲ್ಕು ಜನರ ಮೇಲೆ ದಾಳಿ ಮಾಡಬಹುದು. ಇಡೀ ಕಾಂಗ್ರೆಸ್ ಪಾರ್ಟಿನ ಟ್ರ್ಯಾಪ್ ಮಾಡೋದಕ್ಕೆ ತಯಾರಿ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಮಹಾರಾಷ್ಟ್ರ : ಟ್ರಕ್ ಮತ್ತು ಪಿಕಪ್ ನಡುವೆ ಭೀಕರ ಅಪಘಾತ ; ಮೂವರು ಮಕ್ಕಳು ಸೇರಿ 8 ಮಂದಿ ದುರ್ಮರಣ – vishwanews24
ಬಿಜೆಪಿಯವರ ಮೇಲೆಲ್ಲೂ ಕೂಡ ದಾಳಿ ಮಾಡುತ್ತಿಲ್ಲ. ಸಮುದಾಯ ಮಾತ್ರ ಅಲ್ಲ. ಇಡೀ ಪಕ್ಷವನ್ನೇ ಟಾರ್ಗೆಟ್ ಮಾಡಲಾಗಿದೆ. ವಂದೇ ಮಾತರಂ ಗೀತೆ ಮೊಟಕು ಮಾಡಿರೋ ವಿಚಾರವಾಗಿ, ವಂದೇ ಮಾತರಂ ಬಗ್ಗೆ ನಮ್ಮ ಪಕ್ಷದ ಸ್ಟ್ಯಾಂಡ್ ಸ್ಪಷ್ಟವಾಗಿದೆ. ಅವರು ರಾಜಕೀಯ ಮಾಡ್ತಿದ್ದಾರೆ ಅಷ್ಟೇ ಎಂದಿದ್ದಾರೆ.
