ಜಿಲ್ಲೆಯ JDS ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಶೀಘ್ರದಲ್ಲಿ ಘೋಷಣೆ : ಯೋಗೀಶ್ ವಿ ಶೆಟ್ಟಿ – Vishwanews24

Featured, ಉಡುಪಿ

ಕಾಪು ವಿನಲ್ಲಿ ಜರಗಿದ JDS ಚುನಾವಣಾ ಪೂರ್ವಭಾವಿ ಸಭೆ

ಕಾಪು ವಿಧಾನಸಭಾ ಕ್ಷೇತ್ರ ಚುನಾವಣಾ ಪೂರ್ವಭಾವಿ ಸಭೆಯುದಿನಾಂಕ 12.04.2023ನೇ ಬುಧವಾರ ಕಾಪು ಮಾಹಾಬಲ ಮಾಲಿನ ಪಕ್ಷ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಯೋಗೀಶ ವಿ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಶೀಘ್ರದಲ್ಲಿ ಘೋಷಣೆಯಾಗಲಿದೆ. ನಾವೆಲ್ಲ ಸಂಘಟಿಕರಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಯತ್ನಿಸಬೇಕು, 2ಸಾರಿ ಮುಖ್ಯಮಂತ್ರಿ ಆದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರ ಸಾಧನೆ ಮತ್ತು ಮಾಜಿ ಪ್ರಧಾನಮಂತ್ರಿಯಾದ ಶ್ರೀ ಎಚ್ ಡಿ ದೇವೇಗೌಡರ ಸಾಧನೆ ಮತ್ತು ಪಂಚರತ್ನ ಯೋಜನೆಯ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ನಾಯಕರಿಗೆ ಕಾರ್ಯಕರ್ತರಿಗೆ ಕರೆ ನೀಡಿದರು.

ಶ್ರೀ ವಾಸುದೇವರಾವ್ ರವರು ಮಾತನಾಡಿ ಪಕ್ಷದ ಕಾರ್ಯಕ್ರಮವನ್ನು ಮನೆ ಮನೆಗೆ ತಿಳಿಸಿ ನಮ್ಮ ಅಭ್ಯರ್ಥಿ ವಿಜಯಕ್ಕೆ ಶ್ರಮಿಷಬೇಕಾಗಿ ತಿಳಿಸಿದರು.

ಕಾಪು ವಿಧಾನಸಭಾ ಕ್ಷೇತ್ರದ ಎಲ್ಲಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಮುಖ್ಯಸ್ಥರಾಗಿ ಶ್ರೀ ಸುಧಾಕರ್ ಶೆಟ್ಟಿ ರಾಜ್ಯ ಕಾರ್ಯದರ್ಶಿ, ಮತ್ತು ಶ್ರೀ ವಾಸುದೇವ ರಾವ್ ಜಿಲ್ಲಾ ವಕ್ತಾರರು ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷರವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಯಿತು. ತದನಂತರ ಪಂಚಾಯತ್ ವ್ಯಾಪ್ತಿ ಮಟ್ಟದಲ್ಲಿ ಇತರರನ್ನು ನೇಮಿಸಲಾಗುವುದು. ಕಾಪು ಪುರಸಭಾ ವ್ಯಾಪ್ತಿಯಲ್ಲಿ ಪುರಸಭೆಯ ಸದಸ್ಯರಾದ ಶ್ರೀ ಉಮೇಶ್ ಕರ್ಕೇರ, ಶ್ರೀ ಉದಯ ಆರ್ ಶೆಟ್ಟಿ, ಶ್ರೀ ದೇವರಾಜ್, ಶ್ರೀ ಇಸ್ಮಾಯಿಲ್ ಮೂಳೂರು, ರವರನ್ನು ನೇಮಿಸಲಾಯಿತು.

ಬಂಟ್ವಾಳ: ಜನಾರ್ದನ ಪೂಜಾರಿ ಆಶಿರ್ವಾದ ಪಡೆದ ಶಾಸಕ ಖಾದರ್ – Vishwanews24

ರಾಜ್ಯ ಪ್ರಧಾನ ಕಾರ್ಯದರ್ಶಿ, ಉಡುಪಿ ಜಿಲ್ಲಾ ಉಸ್ತುವಾರಿ ಗಳಾದ ಶ್ರೀ ಪ್ರವೀಣ್ ಚಂದ್ರ ಜೈನ್ ರವರನ್ನು ಜಿಲ್ಲಾವತಿಯಿಂದ ಸನ್ಮಾನಿಸಲಾಯಿತು ಚುನಾವಣಾ ತಯಾರಿ ಬಗ್ಗೆ ಸಭೆಗೆ ವಿವರಗಳ್ಳನ್ನು ತಿಳಿಸಿದರು

ಈ ಸಂದರ್ಭ ರಾಜ್ಯ ಕಾರ್ಯದರ್ಶಿಗಳಾದ ಸುಧಾಕರ್ ಶೆಟ್ಟಿ, ಶ್ರೀ ಉದಯ ಹೆಗ್ಡೆ, ಗಂಗಾಧರ ಬಿರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ದಕ್ಷತ್ ಶೆಟ್ಟಿ,ಇಕ್ಬಾಲ್ ಅತ್ರಡಿ, ಭರತ್ ಕುಮಾರ್ ಶೆಟ್ಟಿ, ಸಂಕಪ್ಪ ಎ,ಸಂಜಯ್ ಕುಮಾರ್, ವೆಂಕಟೇಶ್ ಎಂ ಟಿ,ಪೈಸನ್ ಅಹಮದ್,ರಝಕ್ ಉಚ್ಚಿಲ,ಚಂದ್ರಹಾಸ್ ಏರ್ಮಲ್, ಉದಯ ಆರ್ ಶೆಟ್ಟಿ, ದೇವರಾಜ ತೊಟ್ಟಂ, ಹರಿಣಿ ಆರ್ ಕೋಟಿಯನ್, ಶೋಭಿಬ್, ಆಶ್ರಫ್ ಪಡುಬಿದ್ರಿ, ಬಿ.ಕೆ ಮೊಹಮ್ಮದ್, ಅರವಿಂದ ಶೆಟ್ಟಿ, ರಂಗ ಆರ್ ಕೋಟ್ಯಾನ್, ಸತೀಶ್ ಪೂಜಾರಿ, ರವಿಚಂದ್ರ, ಮಮತಾ, ಸಾಜಿದ್, ವಿಜಯ ಪೂಜಾರಿ, ರಂಜಿತ್ ಕುಮಾರ್, ಇಬ್ರಾಹಿಂ ತವಕ್ಕಲ್, ವಿ.ಡಿ ಶೆಟ್ಟಿ, ನೇಮಿರಾಜ್ ಶೆಟ್ಟಿ, ಅಶೋಕ್ ಕುಮಾರ, ಯುಎ ರಶೀದ್, ಅಮಿರುದ್ದಿನ್, ಸತೀಶ್ ಮತ್ತು ಬೂತ್ ಮಟ್ಟದ ಅಧ್ಯಕ್ಷರುಗಳು, ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.

ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗುರುರಾಜ್ ಶೆಟ್ಟಿ ಗಂಟಿಹೊಳೆ – Vishwanews24

 

Leave a Reply