ಜೀಕಾ ವೈರಸ್ : ಕೇರಳದಲ್ಲಿ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆ -Vishwanews24

Featured, ರಾಷ್ಟ್ರ ನ್ಯೂಸ್

ಜೀಕಾ ವೈರಸ್ : ಕೇರಳದಲ್ಲಿ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆ -Vishwanews24

ತಿರುವನಂತಪುರಂ: ಕೇರಳದಲ್ಲಿ ಮತ್ತೊಂದು ಜೀಕಾ ವೈರಸ್ ಧೃಢಪಡುವ ಮೂಲಕ ರಾಜ್ಯದಲ್ಲಿ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ತಿ ತಿ ಳಿಸಿದ್ದಾರೆ.

ತಿರುವನಂತಪುರಂ ಜಿಲ್ಲೆಯಲ್ಲಿ  37 ವರ್ಷದ ವ್ಯಕ್ತಿಗೆ ಮತ್ತು ಕಳಕೊಟ್ಟಂ ನಲ್ಲಿ 27 ವರ್ಷದ ಮಹಿಳೆಗೆ ವೈರಸ್ ದೃಢಪಟ್ಟಿದೆ. ಒಟ್ಟು 48 ಪ್ರಕರಣಗಳ ಪೈಕಿ 44 ಮಂದಿಗೆ ಪರೀಕ್ಷೆಯಲ್ಲಿ ನೆಗೆಟೀವ್ ವರದಿ  ಬಂದಿದೆ. ಉಳಿದಂತೆ ನಾಲ್ವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ.

ಮೊದಲ ಬಾರಿಗೆ ಕೇರಳದಲ್ಲಿ 24 ವರ್ಷದ ಗರ್ಭಿಣಿಗೆ ಜೀಕಾ ವೈರಸ್ ದೃಢಪಟ್ಟಿತ್ತು.ಕೊರೋನಾದ  ಹೆಚ್ಚುತ್ತಿರುವ ನಡುವೆ ಜೀಕಾ ವೈರಸ್ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.