ಜುಲೈ 27 : ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಕಾಪುವಿನಲ್ಲಿ ಬೃಹತ್ ಪಂಜಿನ ಮೆರವಣಿಗೆ – vishwanews24

Featured, ಉಡುಪಿ

ಜುಲೈ 27 : ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಕಾಪುವಿನಲ್ಲಿ ಬೃಹತ್ ಪಂಜಿನ ಮೆರವಣಿಗೆ

ಕಾಪು : ಬಿಜೆಪಿ ಯುವಮೋರ್ಚ ಕಾಪು ಮಂಡಲದ ವತಿಯಿಂದ ಇಪ್ಪತ್ತೈದನೇ ವರ್ಷದ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಜುಲೈ 27ರಂದು ಸಂಜೆ 6.30ಕ್ಕೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಹೊರಟು ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಕಾಪು ವಾಜಪೇಯಿ ಕಟ್ಟೆಯ ತನಕ ನಡೆಯಲಿದೆ.

ಬಳಿಕ ವಾಜಪೇಯಿ ಕಟ್ಟೆಯ ಸಮೀಪ ಸಭಾ ಕಾರ್ಯಕ್ರ‌ಮ ನಡೆಯಲಿದ್ದು, ಕೇಂದ್ರೀಯ ವಿಶ್ವಸ್ಥ ಮಂಡಳಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಕುಂದಾಪುರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಕಾಪು ಯುವಮೋರ್ಚಾದ ಪ್ರಕಟನೆ ತಿಳಿಸಿದೆ

Leave a Reply