ಜೆಡಿಎಸ್ ಕಾಪು ವಿಧಾನಸಭಾಕ್ಷೇತ್ರ- ಪುರಸಭಾ ಚುನಾವಣೆಯಲ್ಲಿ ವಿಜೇತ ಉಮೇಶ್ ಕರ್ಕೇರಾ ಅವರಿಗೆ ಅಭಿನಂದನಾ ಕಾರ್ಯಕ್ರಮ: vishwanews24

Featured, ಉಡುಪಿ

ಜೆಡಿಎಸ್ ಕಾಪು ವಿಧಾನಸಭಾಕ್ಷೇತ್ರ- ಪುರಸಭಾ ಚುನಾವಣೆಯಲ್ಲಿ ವಿಜೇತ ಉಮೇಶ್ ಕರ್ಕೇರಾ ಅವರಿಗೆ ಅಭಿನಂದನಾ ಕಾರ್ಯಕ್ರಮ: vishwanews24

ಕಾಪು: ಕಾಪು ಪುರಸಭಾ ಚುನಾವಣೆಯ ಕೊಂಬಗುಡ್ಡೆ ವಾರ್ಡಿನಲ್ಲಿ ಜೆಡಿಎಸ್ ಪಕ್ಷದಿಂದ ವಿಜೇತರಾದ ಉಮೇಶ್ ಕರ್ಕೇರಾ ಮತ್ತು ಉಳಿದ ವಾರ್ಡಿನಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಕೊಂಬಗುಡ್ಡೆಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.


ಇದೇ ಸಂದರ್ಭದಲ್ಲಿ ಪಕ್ಷಕ್ಕೆ ಹೊಸ ಕಾರ್ಯಕರ್ತರನ್ನು ಸೇರ್ಪಡೆಗೊಳಿಸಲಾಯಿತು.


ಅಭಿನಂದನೆ ಸ್ವೀಕರಿಸಿದ ಮಾತನಾಡಿದ ಉಮೇಶ್ ಕರ್ಕೇರಾ ” ನನ್ನ ಜೀವಮಾನದಲ್ಲಿ ಮಾಡಿದ ಜನಸೇವೆಯನ್ನು ಗುರುತಿಸಿ ಈಭಾಗದ ಜನರು ಮತದಾನ ಮಾಡಿರುವುದಕ್ಕೆ ಕೃತಜ್ಞತೆ” ಸಲ್ಲಿಸಿದರು.


ಉಡುಪಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ವಾಸುದೇವರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ಜಿಲ್ಲಾ ಜೆಡಿಎಸ್ ನ ಜಿಲ್ಲಾ ಅಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ ಕಾಪು ಪುರಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಜೆಡಿಎಸ್ ಖಾತೆ ತೆರೆಯುವ ಮುಖಾಂತರ ರಾಜಕೀಯದ ಹೊಸ ಬೆಳವಣಿಗೆಗೆ ನಾಂದಿ ಹಾಡಿದೆ ಅದರಲ್ಲೂ ವಿಶೇಷವಾಗಿ ಕೊಂಬಗುಡ್ಡೆ ವಾರ್ಡಿನಲ್ಲಿ ಉಮೇಶ್ ಕರ್ಕೇರಾ ಅವರ ಗೆಲುವು ಅತ್ಯಂತ ಸಂತಸ ತಂದಿದೆ ಮತ್ತು ಈ ಭಾಗದ ಅಭಿವೃದ್ಧಿ ಗೆ ಪೂರಕವಾದ ವಾತಾವರಣ ನಿರ್ಮಾಣವಗಾಲಿದೆ ಎಂದರು.


ವೇದಿಕೆಯಲ್ಲಿಇಕ್ಬಾಲ್ಅತ್ರಾಡಿ,ಆರ್.ಆರ್.ಪುತ್ರನ್,ಉದಯ ಹೆಗ್ಡೆ,ಶಾಹಿದ್ ಜಯರಾಮ ಆಚಾರ್ಯ,ಮೊದಲಾದವರು ಉಪಸ್ಥಿತರಿದ್ದರು.
ಗಣೇಶ್ ಕುಮಾರ್ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Leave a Reply