ಜೆಡಿಎಸ್ ಪಕ್ಷ ಎಂದರೆ ರಾಜಕೀಯ ನಾಯಕರನ್ನು ತಯಾರಿಸುವ ಕಾರ್ಖಾನೆಯಾಗಿದೆ :ಎಚ್.ಡಿ ರೇವಣ್ಣ -Vishwanews24

Featured, ರಾಜ್ಯ ನ್ಯೂಸ್

ಹಾಸನ: ಜೆಡಿಎಸ್ ಪಕ್ಷ ಮುಖಂಡರನ್ನು ತಯಾರಿಸುವ ಕಾರ್ಖಾನೆಯಾಗಿದೆ, ಅವರು ಬೆಳೆದ ಮೇಲೆ ಮೇವು ಎಲ್ಲಿ ಸಿಗುತ್ತದೋ ಅಲ್ಲಿಗೆ ಹೋಗುತ್ತಾರೆ ಎಂದು ಶಾಸಕ ಎಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.

ಬೇಲೂರಿನಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭದ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಬೆಳೆದು ಶಾಸಕರಾಗಿ ಆಯ್ಕೆಯಾದವರು ಬಳಿಕ ಬಿಜೆಪಿಯತ್ತ ಹೊರಟಿರುವ ನಾಯಕರ ವಿರುದ್ಧ ಮಾಜಿ ಸಚಿವ ಎಚ್ ಡಿ ರೇವಣ್ಣ ಕಿಡಿಕಾರಿದರು.

‘ಜೆಡಿಎಸ್ ಪಕ್ಷ ಎಂದರೆ ರಾಜಕೀಯ ನಾಯಕರನ್ನು ತಯಾರಿಸುವ ಕಾರ್ಖಾನೆಯಾಗಿದೆ. ಅವರು ಬೆಳೆದ ಮೇಲೆ ಎಲ್ಲಿ ಮೇವು ಸಿಗುತ್ತದೆಯೋ ಅಲ್ಲಿಗೆ ಹೋಗುತ್ತವೆ’ ಎಂದು ವ್ಯಂಗ್ಯವಾಡಿದರು.

‘ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಚೆನ್ನಾಗಿ ತಿಂದು ಉಂಡು ಬೆಳೆದ ಶಾಸಕರನ್ನು ಸೆಳೆದುಕೊಂಡು ಬಿಜೆಪಿ ನಾಯಕರು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಸಾವಿರಾರು ಕೋಟಿ ರೂಪಾಯಿ ಚೆಲ್ಲಿದ್ದಾರೆ. ಆದರೆ ನಮ್ಮ ಕೆಲಸಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೆಲಸದ ವೇಗ ನಿಧಾನವಾಗಬಹುದು. ನಮ್ಮ ಕೆಲಸಗಳನ್ನು ಪೂರ್ಣಗೊಳಿಸಿಯೇ ತೀರುತ್ತೇವೆ’ ಎಂದು ಹೇಳಿದರು.