ಜೆಡಿಎಸ್ ಪಕ್ಷ ಗೆದ್ದರೂ ಪುರಸಭಾ ಅಧಿಕಾರ ಹಿಡಿಯದು- ಮತವಿಭಜನೆಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಚಾಳಿಯಾಗಿದೆ : ಎಂ.ಎ ಗಫೂರ್ – vishwanews24
ಜೆಡಿಎಸ್ ಪಕ್ಷ ಗೆದ್ದರೂ ಪುರಸಭಾ ಅಧಿಕಾರ ಹಿಡಿಯದು- ಮತವಿಭಜನೆಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಚಾಳಿಯಾಗಿದೆ : ಎಂ.ಎ ಗಫೂರ್
ಕಾಪು: ಇಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿ ರಾಜೀವಭವನದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ ಪಾರ್ಟಿಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎ ಗಫೂರ್ ಜಾತ್ಯತೀತ ಜನಾತದಳ ವಿರುದ್ಧ ಕಿಡಿಕಾರಿದರು.
ಜೆಡಿಎಸ್ ಪಾರ್ಟಿಗೆ ಕರಾವಳಿ ಭಾಗದಲ್ಲಿ ಸರಿಯಾಗಿ ನೆಲೆಯಿಲ್ಲ ಆದರೂ ಅವರ ಚಾಳಿ ಇನ್ನೂ ಬಿಟ್ಟಿಲ್ಲ ,ಈ ಪುರಸಭೆಯ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತಿರುವ ಎಲ್ಲಾ ಅಭ್ಯರ್ಥಿಗಳು ಗೆದ್ದರೂ ಕೂಡ ಪುರಸಭೆಯ ಗದ್ದುಗೆ ಏರಲು ಸಾಧ್ಯವಿಲ್ಲ.ಕೇವಲ ಮತ ವಿಭಜನೆ ಮಾಡಿ ಮತದಾರರಲ್ಲಿ ಗೊಂದಲ ಸೃಷ್ಟಿಸುವ ದೃಷ್ಟಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ ಇದು ಪ್ರತಿ ಚುನಾವಣೆಯಲ್ಲಿ ಚಾಳಿಯಾಗಿದೆ ಎಂದರು.
