ಜ್ಞಾನವಾಪಿ ಮಸೀದಿ ಪ್ರಕರಣ : ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ; ಮುಸ್ಲಿಂ ಪರ ಅರ್ಜಿ ವಜಾ – Vishwanews24

ರಾಷ್ಟ್ರ ನ್ಯೂಸ್

ಜ್ಞಾನವಾಪಿ ಮಸೀದಿ ಪ್ರಕರಣ : ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ – ಮುಸ್ಲಿಂ ಪರ ಅರ್ಜಿ ವಜಾ

ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣ ಸಂಬಂಧ ಹಿಂದೂಗಳಿಗೆ ಮತ್ತೆ ಜಯ ಸಿಕ್ಕಿದೆ. ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ತೆಹ್ಖಾನಾ’ದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

ಈ ಸಂಬಂಧ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಪ್ರತಿಕ್ರಿಯಿಸಿ, ಇಂದು ಅಲಹಾಬಾದ್ ಹೈಕೋರ್ಟ್ ಅಂಜುಮನ್ ಇಂಟೆಜಾಮಿಯಾ ಅವರ ಆದೇಶದ ಮೊದಲ ಮೇಲ್ಮನವಿಯನ್ನು ವಜಾಗೊಳಿಸಿದೆ. ಇದರಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯವು ಜನವರಿ 17 ಮತ್ತು 31 ರಂದು ನೀಡಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ವಿಷಯ ಏನೆಂದರೆ ಜ್ಞಾನವಾಪಿ ಕಾಂಪ್ಲೆಕ್ಸ್‌ನ ‘ವ್ಯಾಸ್ ತೆಹ್ಖಾನಾ’ದಲ್ಲಿ ನಡೆಯುತ್ತಿರುವ ಪೂಜೆ ಮುಂದುವರಿಯುತ್ತದೆ ಎಂದರು.

 

Leave a Reply