ಜ.3೦ರಂದು ಕಟೀಲು ಬ್ರಹ್ಮಕಲಶೋತ್ಸವದಲ್ಲಿ ವಿಭಿನ್ನ ವೇಷಧರಿಸಿ ಮತ್ತೊಂದು ಜೀವಕ್ಕೆ ಆಸರೆಯಾಗಲಿದ್ದಾರೆ ಮೂಡಬಿದ್ರೆಯ ವಿಕ್ಕಿ ಶೆಟ್ಟಿ , ತಮ್ಮ ಕೈಲಾದ ಸಹಾಯ ನೀಡಿ ನಿಹಾರಿಕ ಕುಟುಂಬದ ಜೊತೆ ಕೈ ಜೋಡಿಸಿ.. Vishwanews24

Featured, ಉಡುಪಿ, ದಕ್ಷಿಣ ಕನ್ನಡ

ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಮತ್ತೆ ವಿಭಿನ್ನ ವೇಷಧರಿಸಿ ಮತ್ತೊಂದು ಜೀವಕ್ಕೆ ಆಸರೆಯಾಗಲಿದ್ದಾರೆ ಮೂಡಬಿದ್ರೆಯ ವಿಕ್ಕಿ ಶೆಟ್ಟಿ , ತಮ್ಮ ಕೈಲಾದ ಸಹಾಯ ನೀಡಿ ನಿಹಾರಿಕ ಕುಟುಂಬದ ಜೊತೆ ಕೈ ಜೋಡಿಸಿ..

ಮಹೇಶ್ ಮಡಿವಾಳ ಇವರ ಏಕೈಕ ಮುದ್ದು ಮಗಳು 5 ವರ್ಷ ಪ್ರಾಯದ ನಿಹಾರಿಕ ರಕ್ತದ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದು ಕೆಲ ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ,

ಸಂಪೂರ್ಣ ಗುಣಮುಖವಾಗಲು ಸುಮಾರು 2 ವರ್ಷದ ಚಿಕಿತ್ಸೆ ಪಡೆಯ ಬೇಕೆಂಬುದು ವೈದ್ಯರ ಅಭಿಪ್ರಾಯ, ಒಟ್ಟಾರೆ ಚಿಕಿತ್ಸೆ ವೆಚ್ಚ ಸುಮಾರು 10 ರಿಂದ 12 ಲಕ್ಷ ರೂಪಾಯಿ ಖರ್ಚು ಆಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ದಿನ ಕೂಲಿ ಮಾಡಿ ಜೀವನ ನಡೆಸುತ್ತಿರುವ ತಂದೆ ತಾಯಿ ಚಿಕಿತ್ಸಾ ವೆಚ್ಚ ಭರಿಸಲು ಅಶಕ್ತರಾಗಿರುವುದರಿಂದ ನಿಮ್ಮ ಮತ್ತು ಕಟೀಲು‌ ಮಾತೆಯ ಆಶೀರ್ವಾದದೊಳು ವಿಶೇಷ ವೇಷ ಹಾಕಿ ಈ ಮಗುವಿನ ಬದುಕಿಗೆ ನೆರವಾಗಲಿದ್ದಾರೆ ವಿಕ್ಕಿ ಶೆಟ್ಟಿ ಯವರು..

ನೇತಾಜಿ ಬ್ರಿಗೇಡ್ ವತಿಯಿಂದ ದಿನಾಂಕ 30-1-2020 ಗುರುವಾರ ಬೆಳಿಗ್ಗೆ ಯಿಂದ ರಾತ್ರಿವರೆಗೆ ಕಟೀಲು ತಾಯಿಯ ಸನ್ನಿದಾನದಲ್ಲಿ ನಾನು ವಿಭಿನ್ನ ವೇಷ ಹಾಕಿ ಜನರ ಮುಂದೆ ಹಸ್ತದ ನೆರಳಾಗಿ ನಿಲ್ಲುವೆನು.. ಈ ನನ್ನ ಕೆಲಸಕ್ಕೆ ಕೈ ಜೋಡಿಸಲು ಮರೆಯದಿರಿ..

ವಿಕ್ಕಿ ಶೆಟ್ಟಿ ಬೆದ್ರ