ಟಿಪ್ಪು ಜಯಂತಿ ಆಚರಣೆ ನಿಲ್ಲಿಸಿ : ಸಂಸದ ಪ್ರತಾಪ್ ಸಿಂಹ ಸಿಎಂಗೆ ಮನವಿ

Featured, ಜಿಲ್ಲೆ

ಮೈಸೂರು: ಟಿಪ್ಪು ಜಯಂತಿ ಆಚರಿಸುವುದು ಈ ನಾಡಿನ ಸಂಸ್ಕೃತಿಗೆ ವಿರುದ್ಧವಾದದ್ದು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಾದರೂ ಟಿಪ್ಪು ಜಯಂತಿ ಆಚರಿಸುವುದನ್ನು ಬಂದ್ ಮಾಡಬೇಕು ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.

ನಾಡದೇವಿ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ ಮೈಸೂರು ದಸಾರ ಉದ್ಘಾಟನೆ ನಂತರ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಟಿಪ್ಪು ಜಯಂತಿ‌ ಕುರಿತು ಮಾತನಾಡಿದ ಸಂಸದ ಪ್ರತಾಪ್‌ಸಿಂಹ, ಇಂದು ದಸರಾ ಆಚರಣೆ ಮಾಡುತ್ತಿದ್ದರೆ ಅದು ಮೈಸೂರು ಅರಸರ ಕೊಡುಗೆ.ಅಂತಹ ಕುಟುಂಬದ ರಕ್ತಪಾತಕ್ಕೆ ಕಾರಣವಾಗಿದ್ದು ಟಿಪ್ಪು ಸುಲ್ತಾನ. ಈ ಹೊತ್ತಿನಲ್ಲಾದರೂ ಮೈಸೂರು ಅರಸರಿಗೆ ಗೌರವ ನೀಡಿ. ನಿಮ್ಮ ಆಳ್ವಿಕೆಯಲ್ಲಿಯಾದರೂ ಟಿಪ್ಪು ಜಯಂತಿ ಬಂದ್ ಮಾಡಿ ಎಂದು ವೇದಿಕೆಯಲ್ಲಿದ್ದ ಸಿಎಂ ಕುಮಾರಸ್ವಾಮಿಯವರನ್ನು ಮನವಿ ಮಾಡಿದರು.