ಟಿಪ್ಪು ಜಯಂತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ತ್ರಿವಳಿ ತಲಾಖ್ ಬಗ್ಗೆ ಮೌನವಾಗಿರುವ ಸಿದ್ದರಾಮಯ್ಯ : ಕೆ ಎಸ್ ಈಶ್ವರಪ್ಪ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು,: ಟಿಪ್ಪು ಜಯಂತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ತ್ರಿವಳಿ ತಲಾಖ್ ಬಗ್ಗೆ ಮೌನವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು, ಹಿರಿಯ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಈಶ್ವರಪ್ಪ ಬರೆದುಕೊಂಡಿದ್ದು ಹೀಗೆ, ” ಶಾದಿಭಾಗ್ಯ’ವನ್ನು ಶಾಶ್ವತವಾಗಿ ಉಳಿಸುವ ಟ್ರಿಪಲ್ ತಲಾಕ್ ಬಿಲ್ ರಾಜ್ಯಸಭೆಯಲ್ಲಿ ಪಾಸ್ ಆಗಿ 12 ಗಂಟೆಗಳು ಕಳೆದರೂ, ಮಾಜಿ ಮುಖ್ಯಮಂತ್ರಿಗಳ ಜಾಣ ಕಿವುಡು ಕೆಲಸ ಮಾಡಿದೆ”.

“ಮತಾಂಧನ ಜಯಂತಿ ರದ್ದು ಮಾಡಿದಾಗ ಉಕ್ಕಿ ಬಂದ ರೋಷಾವೇಷಗಳು, ಮುಸ್ಲಿಂ ಮಹಿಳೆಯರ ಗೌರವ ಉಳಿಸುವ ಟ್ರಿಪಲ್ ತಲಾಕ್ ಬಿಲ್ ಪಾಸ್ ಆದ ಕೂಡಲೇ ತಣ್ಣಗಾಗಿದೆ”  ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.

“ದ್ವೇಷ ರಾಜಕಾರಣ ಮಾಡುವುದಿಲ್ಲವೆಂದು ಹೇಳಿ 24 ಗಂಟೆಯೊಳಗೆ ದ್ವೇಷ ರಾಜಕಾರಣ ಮಾಡಿದ ವಚನ ಭ್ರಷ್ಟ @BSYBJP. ಕೇವಲ ಕೋಮುವಾದ ದೃಷ್ಟಿಕೋನದಿಂದಲೇ ಇತಿಹಾಸವನ್ನು ನೋಡುವ ಬಿಜೆಪಿ/ಆರೆಸ್ಸೆಸ್‌ ಇತಿಹಾಸವನ್ನು, ಟಿಪ್ಪುವಿನ ಕೊಡುಗೆಯನ್ನು ಓದಿ ತಿಳಿದುಕೊಳ್ಳಬೇಕಿದೆ” ಎಂದು ಕೆಪಿಸಿಸಿ ಟ್ವೀಟ್ ಮಾಡಿತ್ತು.