ಟೀಮ್ ಮಾರುತಿ ಮೂಳೂರು ಪಿಲಿಪೆಜ್ಜೆ ಸಮರ್ಪಣಾ ಸಮಾರಂಭ: vishwanews24
ಟೀಮ್ ಮಾರುತಿ ಮೂಳೂರು ಪಿಲಿಪೆಜ್ಜೆ ಸಮರ್ಪಣಾ ಸಮಾರಂಭ: vishwanews24
ಕಾಪು: ಮೂಳೂರಿನ ಕುಟುಂಬವೊಂದಕ್ಕೆ ಆಸರೆಯಾಗುವ ಉದ್ದೇಶದಿಂದ ಕಳೆದ ವರ್ಷ ದಸರಾ ಸಮಯದಲ್ಲಿ ಹುಲಿವೇಷ ಧರಿಸಿ ಧನ ಸಂಗ್ರಹಿಸಿ ಸಂಕಲ್ಪಿಸಿದ ಶೌಚಾಲಯ ನಿರ್ಮಾಣದ ಯೋಜನೆಯನ್ನು ಪೂರ್ಣಗೊಳಿಸಿದ್ದು ಇದನ್ನು ಅ ಕುಟುಂಬಕ್ಕೆ ಸಮರ್ಪಿಸುವ ಉದ್ದೇಶದಿಂದ ದಿನಾಂಕ 13 ಅಗಸ್ಟ್ ಆದಿತ್ಯವಾರದಂದು ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹದಲ್ಲಿ “ಸಮರ್ಪಣಾ ಸಮಾರಂಭ” ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಇದೇ ಸಂಧರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದಿಸುವ ಹುಲಿವೇಷ ಧರಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮವೂ ಜರಗಲಿದೆ.
