ಟೈಯರ್ ಸ್ಫೋಟವಾಗಿ ಉರುಳಿದ ಕಾರ್; ಪ್ರಾಣಾಪಾಯದಿಂದ ಪಾರಾದ ಮಾಜಿ ಸಚಿವ ಟಿ.ಬಿ.ಜಯಚಂದ್ರ – VIshwanews24

Featured, ರಾಜ್ಯ ನ್ಯೂಸ್

ಟೈಯರ್ ಸ್ಫೋಟವಾಗಿ ಉರುಳಿದ ಕಾರ್; ಪ್ರಾಣಾಪಾಯದಿಂದ ಪಾರಾದ ಮಾಜಿ ಸಚಿವ ಟಿ.ಬಿ.ಜಯಚಂದ್ರ

ಶಿರಾ : ರಾಷ್ಟ್ರೀಯ ಹೆದ್ದಾರಿ-48ರ ಸೀಬಿ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತವಾಗಿದ್ದು, ಗಾಯಗೊಂಡಿದ್ದಾರೆ.

ಶಿರಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಮಯದಲ್ಲಿ ಸೀಬಿ ಬಳಿ ಕಾರಿನ ಹಿಂದಿನ ಚಕ್ರ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಈ ಸಮಯದಲ್ಲಿ ಜಯಚಂದ್ರ ಅವರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಏರ್‌ ಬ್ಯಾಗ್‌ ತೆರೆದುಕೊಂಡ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಜಯಚಂದ್ರ ಅವರ ಎಡ ಭುಜಕ್ಕೆ ಪೆಟ್ಟಾಗಿದ್ದು ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಅವರ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಚಾಲಕ ದಿಲೀಫ್ ಹಾಗೂ ಗನ್ ಮ್ಯಾನ್ ಕೃಪೇಶ್ ಆರೋಗ್ಯವಾಗಿದ್ದಾರೆ.

ಮಂಗಳೂರು: ಖ್ಯಾತ ಗಾಯಕಿ ಸುರೇಖಾ ಪೈ ನಿಧನ – Vishwanews24

Leave a Reply