ಡಿ. 5ರಂದು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ -Vishwanews24
ಡಿ. 5ರಂದು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ -Vishwanews24
ಕಾರ್ಕಳ : ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಡಿ. 5ರಂದು ಜರಗಲಿದೆ. ಬೆಳಿಗ್ಗೆ 7 ಗಂಟೆಗೆ ಪ್ರಾರ್ಥನೆ, ಬಳಿಕ ಶ್ರೀ ಶ್ರೀನಿವಾಸ ಹಾಗೂ ಶ್ರೀ ವೆಂಕಟರಮಣ ದೇವರು ವನಕ್ಕೆ ಹೊರಡುವ ಉತ್ಸವ ನಡೆಯಲಿದೆ.
ಸರಕಾರದ ಕೋವಿಡ್ ನಿಯಮ ಉಲ್ಲಂಘನೆ ಆಗದಂತೆ ಕಾರ್ಯಕ್ರಮ ನಡೆಯಲಿದೆ. ಫಲ ಕಾಣಿಕೆ ಸಮರ್ಪಿಸುವವರು ಪ್ರಾಥಃಕಾಲ 7. ರೊಳಗೆ ಸಮರ್ಪಿಸಬೇಕು ಮತ್ತು ಉತ್ಸವ ಆರಂಭವಾಗಿ ಒಳಗಿನ ಪ್ರದಕ್ಷಿಣೆಯಲ್ಲಿ ಉರುಳು ಸೇವೆಗೆ ಅವಕಾಶವಿಲ್ಲ. ಉತ್ಸವದ ಕಾಲದಲ್ಲಿ ದೇವರಿಗೆ ಆರತಿ ಸಮರ್ಪಿಸಲು ಅವಕಾಶವಿರುವುದಿಲ್ಲ (ಇದರ ಬಾಪ್ತು ಬತ್ತಿ, ಎಣ್ಣೆಯನ್ನು ದೇವಳಕ್ಕೆ ಸಮರ್ಪಿಸಬಹುದು).
ಪೂರ್ವಾಹ್ನರಿಂದ ಸಯಂಕಾಲದವರೆಗೆ ದೇವರ ದರ್ಶನ ಮತ್ತು ವನಭೋಜನ ಪ್ರಸಾದ ಪಡೆಯುವುದು. ಸಾಯಂಕಾಲ ವನದಿಂದ ಮಣ್ಣಗೋಪುರಕ್ಕೆ ಹೊರಡುವುದು, ಮಣ್ಣಗೋಪುರದಲ್ಲಿ ದೇವರಿಗೆ ಪೂಜೆ (ದರ್ಶನದ ಯಾ ಹಣ್ಣ ಕಾಯಿ ಸಮರ್ಪಿಸಲು ಯಾರಿಗೂ ಅವಕಾಶವಿಲ್ಲ) ಸಾಯಂಕಾಲ ರಾಜೋಪಚಾರ ಪೂಜೆಯ ಬಳಿಕ ಮಣ್ಣ ಗೋಪುರದಿಂದ ದೇವಳಕ್ಕೆ ಉತ್ಸವ ಹೊರಡುವುದು. ಆಯಾ ಗುರ್ಜಿ ಸೇವೆಯ ಸ್ಥಾನದಲ್ಲಿ ಕೇವಲ ಗುರ್ಜಿಸೇವಾದಾರರಿಗೆ ಪ್ರಸಾದ. ದೇವಳಕ್ಕೆ ತಲುಪಿದ ಬಳಿಕ ಆವರಣದೊಳಗೆ ಆಗುವ ಎಲ್ಲ ಕಾರ್ಯಕ್ರಮಗಳು ಯಥಾ ಪ್ರಕಾರ ಜರುಗುವುದು ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.
