ಡೆಂಗಿ ಜ್ವರ ಪತ್ತೆ ಪರೀಕ್ಷೆ: ಪರಿಷ್ಕೃತ ದರ – vishwanews24
ಡೆಂಗಿ ಜ್ವರ ಪತ್ತೆ ಪರೀಕ್ಷೆ: ಪರಿಷ್ಕೃತ ದರ
ಉಡುಪಿ : ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು, ಖಾಸಗಿ ಪ್ರಯೋಗ ಶಾಲೆಗಳು ಹಾಗೂ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020, ಸೆಕ್ಷನ್ 4(1) ಮತ್ತು 4(2)ಕೆ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಡೆಂಗಿ ಜ್ವರ ಪತ್ತೆ ಹಚ್ಚುವ ಪರೀಕ್ಷೆಗಳಾದ ಡೆಂಗಿ ಎಲಿಸಾ ಎನ್‌ಎಸ್‌ಐ1ಕ್ಕೆ 300 ರೂ, ಡೆಂಗಿ ಎಲಿಸಾ ಐಜಿಎಂಗೆ 300 ರೂ. ಹಾಗೂ ಸ್ಕೃಿನೀಂಗ್ ಟೆಸ್ಟ್ ರ್ಯಾಪಿಡ್ ಕಾರ್ಡ್ ಟೆಸ್ಟ್ ಫಾರ್ ಎನ್‌ಎಸ್‌ಐ, ಐಜಿಎಂ ಹಾಗೂ ಐಜಿಜಿಗೆ ಒಟ್ಟು 250 ರೂ. ಪರಿಷ್ಕೃತ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.
ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ – vishwanews24
ಆದ್ದರಿಂದ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು, ಖಾಸಗಿ ಪ್ರಯೋಗ ಶಾಲೆಗಳು ಹಾಗೂ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳು ಪರಿಷ್ಕೃತ ದರಗಳನ್ನು ನಿಗದಿಪಡಿಸಿ ಹೊರಡಿಸಿರುವ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
