ತಂದೆಯಿಂದ ನಿರಂತರ ಅತ್ಯಾಚಾರ ; ಗರ್ಭ ಧರಿಸಿದ 14 ವರ್ಷದ ಮಗಳು – vishwanews24
ತಂದೆಯಿಂದ ನಿರಂತರ ಅತ್ಯಾಚಾರ ; ಗರ್ಭ ಧರಿಸಿದ 14 ವರ್ಷದ ಮಗಳು
ತುಮಕೂರು: ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲದೆ 14 ವರ್ಷದ ಮಗಳು ಗರ್ಭ ಧರಿಸಿದ್ದಾಳೆ.
ಕೋವಿಡ್ ಅಕ್ರಮ: ಸುಧಾಕರ್ ವಿರುದ್ಧ ಸರ್ಕಾ ರ ಮುಲಾಜಿಲ್ಲದೇ ಕ್ರಮ: ಶಾಸಕ ಪ್ರದೀಪ್ ಈಶ್ವರ್ – vishwanews24
ಎಂಟು ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಹೊರ ರಾಜ್ಯದಿಂದ ಬಂದಿದ್ದ ಕುಟುಂಬ ಹೊನ್ನವಳ್ಳಿಯಲ್ಲಿ ನೆಲೆಸಿದೆ. ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ತನ್ನ ಮಗಳ ಮೇಲೆಯೇ ತಂದೆ ಕ್ರೌರ್ಯ ಮೆರೆದಿರುವುದು ತಿಳಿಯುತ್ತಿದ್ದಂತೆ ಪೋಕ್ಸೋ ಪ್ರಕರಣ ಹಾಗೂ ಅತ್ಯಾಚಾರ ಆರೋಪ ಅಡಿ ಕೇಸ್ ದಾಖಲಾಗಿದೆ. ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
