ತಮ್ಮ ಜೀವನದ 100 ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ಅವರ ತಾಯಿ – Vishwanews24
ಪ್ರಧಾನಿ ಮೋದಿ ಅವರ ತಾಯಿ ಹಿರ್ ಬೆನ್ ಮೋದಿಗೆ ನೂರು ವರ್ಷ – Vishwanews24
ನವದೆಹಲಿ,: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಿರ್ ಬೆನ್ ಮೋದಿ ಅವರು ಜೂನ್ 18 ರ ಶನಿವಾರದಂದು ತಮ್ಮ ಜೀವನದ 100 ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಪ್ರಧಾನಿ ಮೋದಿಯವರ ತವರೂರಾದ ವಡ್ನಗರದಲ್ಲಿ ಅವರ ತಾಯಿಯ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.
“ಹಿರ್ ಬೆನ್ ಅವರು ಜೂನ್ 18, 1923 ರಂದು ಜನಿಸಿದರು. ಅವರು ಜೂನ್ 18, 2022 ರಂದು ತಮ್ಮ ಜೀವನದ 100 ನೇ ವರ್ಷಕ್ಕೆ ಕಾಲಿಡುತ್ತಾರೆ”ಎಂದು ಪ್ರಧಾನಿಯವರ ಕಿರಿಯ ಸಹೋದರ ಪಂಕಜ್ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಜೂನ್ 18 ರಂದು ಗುಜರಾತ್ಗೆ ಒಂದು ದಿನದ ಭೇಟಿ ನೀಡಲಿದ್ದು, ಅವರು ಪಾವಗಡ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಮತ್ತು ನಂತರ ವಡೋದರಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದಿನಿಂದ 3 ದಿನಗಳ ಕಾಲ ಸಿಇಟಿ ಪರೀಕ್ಷೆ ; – ಹಿಜಬ್, ವಾಚ್ ಧರಿಸೋ ಹಾಗಿಲ್ಲ – Vishwnaews24
