ತವರು ಜಿಲ್ಲೆಗೆ ಬಂದ ಉಮೇಶ್ ಕತ್ತಿ ಪಾರ್ಥಿವ ಶರೀರ : ಮುಗಿಲು ಮುಟ್ಟಿದ ಆಕ್ರಂದನ – Vishwanews24

Featured, ರಾಜ್ಯ ನ್ಯೂಸ್

ತವರು ಜಿಲ್ಲೆಗೆ ಬಂದ ಉಮೇಶ್ ಕತ್ತಿ ಪಾರ್ಥಿವ ಶರೀರ : ಮುಗಿಲು ಮುಟ್ಟಿದ ಆಕ್ರಂದನ

ಬೆಳಗಾವಿ: ಸಚಿವ ಉಮೇಶ್​ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಬೆಳಗಾವಿಗೆ ತರಲಾಗಿದ್ದು, ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಲ್ಲದ ಬಾಗೇವಾಡಿಗೆ ಅಂತಿಮ ಯಾತ್ರೆ ಹೊರಟಿದೆ.

ಉಮೇಶ ಕತ್ತಿ ಅವರ ಪಾರ್ಥಿವ ಶರೀರವನ್ನು ತರುತ್ತಿದ್ದಂತೆ ಕತ್ತಿ ಅಭಿಮಾನಿಗಳು ಹಾಗೂ ಬೆಂಬಲಿಗರ ಆಕ್ರಂದನ ಮುಗಿಲು ಮುಟ್ಟಿತ್ತು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಹಸ್ರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ‘ಅಮರ ರಹೇ, ಅಮರ ರಹೇ, ಉಮೇಶ ಕತ್ತಿ ಅಮರ ರಹೇ’ ಘೋಷಣೆ ಮೊಳಗಿತ್ತು. ವಿಮಾನ ನಿಲ್ದಾಣ ಪ್ರಾಂಗಣದಲ್ಲಿ ಜನಸ್ತೋಮವೇ ಸೇರಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಸೇನಾ ವಾಹನದಲ್ಲಿ ಉಮೇಶ್​ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಲ್ಲದ ಬಾಗೇವಾಡಿಗೆ ತೆಗೆದುಕೊಂಡು ಹೋಗಲಾಗುತ್ತಿದೆ.

ನಾಳೆ ನಡೆಯಬೇಕಾಗಿದ್ದ BJP ಜನೋತ್ಸವ ಸಮಾವೇಶ ಸೆ.11 ಕ್ಕೆ ಮುಂದೂಡಿಕೆ – Vishwanews24

Leave a Reply