ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ವೇಣು ಮಾಧವ್ ವಿಧಿವಶ -Vishwanews24
ಹೈದರಾಬಾದ್: ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ವೇಣು ಮಾಧವ್(39) ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ.
ವೇಣು ಮಾಧವ್ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚಿಗಷ್ಟೇ ಅವರನ್ನು ಸಿಕಂದರಬಾದ್‍ನಲ್ಲಿರುವ ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ವೇಣು ಮಾಧವ್ ಅವರ ಯಕೃತ್ತು ತೀವ್ರ ಹಾನಿಗೆ ಒಳಗಾಗಿತ್ತು. ಹೀಗಾಗಿ ಅವರಿಗೆ ಯಕೃತ್ ಕಸಿ ಮಾಡುವ ಅವಶ್ಯಕತೆ ಇತ್ತು. ಆದರೆ ವೇಣುಮಾಧವನ್ ಸ್ಥಿತಿ ತೀವ್ರ ಚಿಂತಾಜನಕವಾಗಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇವರು ತೆಲಗು, ತಮಿಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದುವರೆಗೂ ಅವರು 170ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟ ಚಿರಂಜೀವಿ, ಪ್ರಭಾಸ್, ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಮತ್ತು ಮಹೇಶ್ ಬಾಬು ಸೇರಿದಂತೆ ಮೇರು ನಟರ ಜೊತೆ ನಟಿಸಿದ್ದರು. 1996 ರಲ್ಲಿ ಸಿನಿರಂಗ ಪ್ರವೇಶಿಸಿದ ಅವರು, ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
