ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ : 13 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ನಾಮಪತ್ರ ಸಲ್ಲಿಸಿದ್ದ ಒಬ್ಬರ ನಾಮಪತ್ರ ತಿರಸ್ಕರವಾಗಿದ್ದು, ಇನ್ನೊಬ್ಬರು ನಾಮಪತ್ರ ಹಿಂಪಡೆದಿದ್ದಾರೆ.

ಅಭ್ಯರ್ಥಿಗಳು ಧಾರ್ಮಿಕ ಪ್ರದೇಶಗಳಿಗೆ ಭೇಟಿ ನೀಡಬಹುದು ಆದರೆ ಯಾವುದೇ ಕಾರಣಕ್ಕೂ ಮತ ಯಾಚಿಸುವಂತಿಲ್ಲ. ಯಾಚಿಸಿದ್ದು ತಿಳಿದರೆ ಜೀವನ ಪರ್ಯಾಂತ ಚುನಾವಣೆಯಲ್ಲಿ ಭಾಗವಹಿಸದಂತೆ ನೀತಿ ಸಂಹಿತೆ ಅನುಸಾರ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 17,24,566 ಮತದಾರರಿದ್ದು ಅದರಲ್ಲಿ ಮಹಿಳಾ ಮತದಾರರು 8,45,283 ಮತ್ತು 8,79,186 ಪುರುಷ ಮತದಾರರಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ: 

ನಳಿನ್ ಕುಮಾರ್ ಕಟೀಲ್ (ಬಿಜೆಪಿ) 
ಮಿಥುನ್ ಎಂ ರಾಯ್ (ಕಾಂಗ್ರೆಸ್) 
ಎಸ್ ಸತೀಶ್ ಸಾಲಿಯಾನ್ (ಬಿಎಸ್ಪಿ) 
ಮೊಹಮ್ಮದ್ ಎಲಿಯಸ್ (ಎಸ್ಡಿಪಿಐ) 
ವಿಜಯ್ ಶ್ರೀನಿವಾಸ್ ಸಿ (ಉತ್ತರಾ ಪ್ರಜಾಕೀಯ ಪಕ್ಷದ) 
ಸುಪ್ರೀತ್ ಕುಮಾರ್ ಪೂಜಾರಿ (ಹಿಂದೂಸ್ಥಾನ್ ಜನತಾ ಪಾರ್ಟಿ) 
ಅಬ್ದುಲ್ ಹಮೀದ್ 
ಅಲೆಕ್ಸಾಂಡೆ
ದೀಪಕ್ ರಾಜೇಶ್ ಕೋಲೋಹೋ 
ಮೊಹಮ್ಮದ್ ಖಾಲಿದ್, 
ಮ್ಯಾಕ್ಸಿಮ್ ಪಿಂಟೋ, 
ವೆಂಕಟೇಶ್ ಬೆಂಡೆ , 
ಎಚ್ ಸುರೇಶ್ ಪೂಜಾರಿ.