ದಸರಾ ಉದ್ಘಾಟನೆ : ಎಸ್‌ ಎಂ ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ. ಬೊಮ್ಮಾಯಿ -Vishwanews24

Featured, ರಾಜ್ಯ ನ್ಯೂಸ್

ದಸರಾ ಉದ್ಘಾಟನೆ : ಎಸ್‌ ಎಂ ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ -Vishwanews24

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಶನಿವಾರ ಮಾಜಿ ಮುಖ್ಯಮಂತ್ರಿ ಭೇಟಿ ನೀಡಿದ್ದು, ನಾಡ ಹಬ್ಬ ದಸರಾ ಮಹೋತ್ಸವ – 2021ರ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ.

ಈ ಬಾರಿಯ ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್‌ ಎಂ ಕೃಷ್ಣಾ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಹಿನ್ನೆಲೆ ಇಂದು ಸಿಎಂ ಬವರಾಜ ಬೊಮ್ಮಾಯಿ ಅವರು ಎಸ್‌ ಎಂ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಆಹ್ವಾನ ನೀಡಿದರು.

ಈ ಸಂದರ್ಭ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, “ದಸರಾ ಉದ್ಘಾಟನೆಗೆ ಎಸ್‌ ಎಂ ಕೃಷ್ಣ ಅವರನ್ನು ಆಹ್ವಾನಿಸಿದ್ದೇವೆ. ಅವರು ನಮ್ಮ ಆಹ್ವಾನಕ್ಕೆ ಒಪ್ಪಿಕೊಂಡಿದ್ದಾರೆ. ಎಸ್‌ ಎಂ ಕೃಷ್ಣ ಅವರು ಓರ್ವ ಮುತ್ಸದ್ಧಿ ರಾಜಕಾರಣಿ” ಎಂದಿದ್ದಾರೆ.

ಈ ವೇಳೆ ಪ್ರೇಮಾ ಕೃಷ್ಣ, ಕಂದಾಯ ಸಚಿವ ಆರ್ ಅಶೋಕ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಮೈಸೂರು ಮೇಯರ್ ಸುನಂದಾ ಪಾಲನೇತ್ರ ಉಪಸ್ಥಿತರಿದ್ದರು.

ಕೋವಿಡ್ ಮಾರ್ಗಸೂಚಿಗಳೊಂದಿಗೆ ಅ. 7ರಿಂದ ಅ.16ರವರೆಗೆ ಮಂಗಳೂರು ದಸರ -Vishwanews24