ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ ; ಮದುವೆಯಲ್ಲಿ ಕನ್ಯಾದಾನ ಮಾಡಲು ನಿರಾಕರಿಸಿದ ತಂದೆ – Vishwanews24

Featured, ರಾಷ್ಟ್ರ ನ್ಯೂಸ್
ಕೋಲ್ಕತ್ತಾ:  ವಿವಾಹ ಸಮಾರಂಭವೊಂದರಲ್ಲಿ ವಧುವಿನ ತಂದೆಯೊಬ್ಬರು ’ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ ’ ಎಂದು ಹೇಳಿರುವ ವಿಡಿಯೋ ಒಂದು ವೈರಲ್ ಆಗಿದೆ.
ಕಳೆದ ಸೋಮವಾರ ತಂದೆಯೊಬ್ಬರು ಮಗಳ ಮದುವೆ ಮಾಡುತ್ತಿದ್ದು ಈ ಸಮಾರಂಭದಲ್ಲಿ ಸಂಪ್ರದಾಯದ ಪ್ರಕಾರ ವಧುವಿನ ತಂದೆ ಭಾಷಣ ಮಾಡಿ ವಧುವನ್ನು ದಾನ ಮಾಡುತ್ತಿದ್ದೇನೆ ಎಂದು ಹೇಳಬೇಕಿತ್ತು. ಆದರೆ ತಂದೆ ನಾನು ಮಗಳನ್ನು ಕನ್ಯಾದಾನ ಮಾಡುವುದಿಲ್ಲ ಏಕೆಂದರೆ ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ ಫೋಟೋವೊಂದನ್ನು ಟ್ವೀಟ್ ಮಾಡಿರುವ ಅಸ್ಮಿತಾ ಪೋಪ್ ಎಂಬುವರು ನಾನು ಒಂದು ಮದುವೆಗೆ ಹೋಗಿದ್ದೆ. ಅಲ್ಲಿ ಪುರುಷರಿಗೆ ಬದಲಾಗಿ ಮಹಿಳಾ ಪುರೋಹಿತರು ವಿವಾಹದ ವಿಧಿವಿಧಾನಗಳನ್ನು ನಡೆಸಿಕೊಡುತ್ತಿದ್ದರು. ಈ ವೇಳೆ ವಧುವಿನ ತಂದೆ ಭಾಷಣ ಮಾಡಬೇಕಿತ್ತು. ಆಗ ತಂದೆ ನಾನು ಕನ್ಯಾದಾನ ಮಾಡುವುದಿಲ್ಲ. ನನ್ನ ಮಗಳು ಆಸ್ತಿಯಲ್ಲ ಎಂದು ಹೇಳಿದ್ದರು ಎಂದು ಅಸ್ಮಿತಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.