ದೃಶ್ಯಂ ಚಿತ್ರದ ನಿರ್ದೇಶಕ ನಿಶಿಕಾಂತ್ ಕಾಮತ್ ವಿಧಿವಶ -Vishwanews24
ಹೈದರಾಬಾದ್: “ದೃಶ್ಯಂ”, “ಮದಾರಿ” ಯಂತಹಾ ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ನಿಶಿಕಾಂತ್ ಕಾಮತ್ ನಿಧನರಾಗಿದ್ದಾರೆ. ಹೈದರಾಬಾದ್‌ನ ಆಸ್ಪತ್ರೆ ಮೂಲಗಳ ಪ್ರಕಾರ ಕಾಮತ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು “ನಿರ್ದೇಶಕ ನಿಶಿಕಾಂತ್ ಕಾಮತ್ ಅವರು ಇಂದು 4:24 ಗಂಟೆಗೆ ನಿಧನರಾದರು. ಅವರು ಕಳೆದ ಎರಡು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರು” ಎಂದು ಹೈದರಾಬಾದ್ ಎಐಜಿ ಆಸ್ಪತ್ರೆ ಹೇಳಿದೆ.
ಯಕೃತ್ತಿನ ಸಮಸ್ಯೆಯಿಂದ ಹಲವು ದಿನಗಳಿಂದ ಬಳಲುತ್ತಿದ್ದ ನಿಶಿಕಾಂತ್ ಅವರು, ಅನಾರೋಗ್ಯ ಹೆಚ್ಚಾದ ಕಾರಣ ಜು.31ರಂದು ಹೈದರಾಬಾದ್’ನ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದರು.
ಮರಾಠಿ ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಿಶಿಕಾಂತ್ ಅವರು, ಬಾಲಿವುಡ್ ಸಿನಿಮಾಗಳಿಂದ ಹೆಚ್ಚು ಖ್ಯಾತಿ ಪಡಿದಿದ್ದಾರೆ. 2005ರಲ್ಲಿ ಮರಾಠಿಯ ‘ದೊಂಬಿವಾಲಿ ಫಾಸ್ಟ್’ ಸಿನಿಮಾದ ಮೂಲಕ ನಿರ್ದೇಶನದ ಹಾದಿ ಹಿಡಿದಿದ್ದರು. ಈ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿತ್ತು.
Director #NishikantKamat passed away at 1624 hours today. He was suffering from Liver Cirrhosis for the past two years: AIG Hospitals, Hyderabad https://t.co/86NL4bEJR4
— ANI (@ANI) August 17, 2020
