ದೇವರ ಹಾಗೂ ಜನರ ಇಚ್ಛೆಯ ಸರ್ಕಾರ ಬರಲಿ ; ಪೇಜಾವರ ಶ್ರೀ
ಉಡುಪಿ: ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಶ್ರೀಪಾದರು ಉಡುಪಿಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮತ ಚಲಾಯಿಸಿದ ಬಳಿಕ ಮಾತನಾಡಿದ ಶ್ರೀಗಳು ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಮತ ಚಲಾಯಿಸಿದ್ದೇನೆ ಎಂದರು.ಈ ದೇಶಕ್ಕೆ ಒಳಿತಾಗಬೇಕು. ದೇಶದಲ್ಲಿರುವ ಅಭದ್ರತೆ ಹಾಗೂ ಸಮಸ್ಯೆಗಳು ಬಗೆಹರಿಯಬೇಕು ಎಂದು ಹೇಳಿದರು. ಯಾವ ಸರ್ಕಾರ ಬರಬೇಕು ಎಂದು ಪ್ರಶ್ನಿಸಿದಾಗ,ನಾನು ಯಾವುದಕ್ಕೂ ಉತ್ತರ ನೀಡುವುದಿಲ್ಲ,ಎಲ್ಲದಕ್ಕೂ ಒಂದೇ ಉತ್ತರ,ರಾಜ್ಯಕ್ಕೆ ಒಳ್ಳೆಯದಾಗಬೇಕು.ಅದೇ ನಮ್ಮ ಪ್ರಾರ್ಥನೆ ಎಂದರು. ದೇವರ ಇಚ್ಛೆ ಮತ್ತು ಜನರ ಇಚ್ಛೆಯ ಸರ್ಕಾರ ಬರುತ್ತದೆ ಎಂದರು.
ಜಿಲ್ಲೆಯ ಅಭ್ಯರ್ಥಿಗಳಿಗೆ ಹಾರೈಸಿದ ಶ್ರೀಗಳು, ಎಲ್ಲರಿಗೂ ಒಳಿತಾಗಲಿ. ಅಹಿತಕರವಾಗಿ ಏನೂ ಸಂಭವಿಸದಿರಲಿ ಎಂದರು.
