ದೇವೇಗೌಡರ ಆಡಳಿತದಲ್ಲಿ ದೇಶದಲ್ಲಿ ಒಂದೇ ಒಂದು ಉಗ್ರ ದಾಳಿ ನಡೆದಿರಲಿಲ್ಲ,ಶಾಂತಿ ನೆಲೆಸಿತ್ತು : ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ನರೇಂದ್ರ ಮೋದಿ ಅವರ 5 ವರ್ಷದ ಆಡಳಿತಕ್ಕೆ ಹೋಲಿಸಿದರೆ ಹೆಚ್.ಡಿ. ದೇವೇಗೌಡರ 10 ತಿಂಗಳ ಆಡಳಿತವೇ ಉತ್ತಮವಾಗಿತ್ತು. ದೇಶದಲ್ಲಿ ಒಂದೇ ಒಂದು ಉಗ್ರ ದಾಳಿ ನಡೆದಿರಲಿಲ್ಲ, ಶಾಂತಿ ನೆಲೆಸಿತ್ತು ಎಂದು ಸಿಎಂ ಹೆಚ್. ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಎಎನ್ ಐ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇವೇಗೌಡರ ಆಡಳಿತದ ಸಂದರ್ಭದಲ್ಲಿ ಕಣಿವೆ ನಾಡಿನಲ್ಲಿ ಶಾಂತಿ ನೆಲೆಸಿತ್ತು. ರಾಜ್ಯದಲ್ಲಿ ಒಂದೇ ಒಂದು ಬಾಂಬ್ ಸ್ಪೋಟವಾಗಿರಲಿಲ್ಲ. ನೆರೆ ರಾಷ್ಟ್ರದ ಜೊತೆಗೆ ಯಾವುದೇ ಸಂಘರ್ಷಗಳಿರಲಿಲ್ಲ. ಗಡಿಯಲ್ಲಿ ಶಾಂತಿ ಇತ್ತು ಎಂದರು.

ದೇವೇಗೌಡರು ಅನುಭವಿ ಮತ್ತು ಈ ವಿಷಯದಲ್ಲಿ ಎಲ್ಲರಿಗಿಂತ ಉತ್ತಮರಾಗಿದ್ದು, ರಾಹುಲ್ ಗಾಂಧಿ ಪ್ರಧಾನಿಯಾದರೆ ಆಡಳಿತ ನೆಲೆಸಲು ಸಲಹೆ ನೀಡಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ರಾಹುಲ್ ಗಾಂಧಿ ಉತ್ತಮ ಆಡಳಿತ ನಡೆಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.