ದೇಶದಲ್ಲಿ ವ್ಯವಸ್ಥೆಯು ಭಾರತದ ಸಂವಿಧಾನದ ಮೇಲೆ ನಡೆಯಬೇಕೇ ಹೊರತು ಇಸ್ಲಾಮಿಕ್ ಕಾನೂನಿನ ಮೂಲಕವಲ್ಲ : ಸಿಎಂ ಯೋಗಿ – Vishwanews24
ದೇಶದಲ್ಲಿ ವ್ಯವಸ್ಥೆಯು ಭಾರತದ ಸಂವಿಧಾನದ ಮೇಲೆ ನಡೆಯಬೇಕೇ ಹೊರತು ಇಸ್ಲಾಮಿಕ್ ಕಾನೂನಿನ ಮೂಲಕವಲ್ಲ : ಸಿಎಂ ಯೋಗಿ – Vishwanews24
ಲಕ್ನೋ : ದೇಶದಲ್ಲಿ ವ್ಯವಸ್ಥೆಯು ಭಾರತದ ಸಂವಿಧಾನದ ಮೇಲೆ ನಡೆಯಬೇಕೇ ಹೊರತು ಶರಿಯತ್ ಅಥವಾ ಇಸ್ಲಾಮಿಕ್ ಕಾನೂನಿನ ಮೂಲಕವಲ್ಲ ಎಂದು ಕರ್ನಾಟಕ ಹಿಜಾಬ್ ವಿವಾದದ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ.
“ನಮ್ಮ (ಮುಸ್ಲಿಂ) ಹೆಣ್ಣು ಮಕ್ಕಳಿಗೆ ಹಕ್ಕುಗಳನ್ನು ಮತ್ತು ಆಕೆಗೆ ಅರ್ಹವಾದ ಗೌರವವನ್ನು ನೀಡಲು ಪ್ರಧಾನ ಮಂತ್ರಿ ತ್ರಿವಳಿ ತಲಾಖ್ ಕಾನೂನನ್ನು ರದ್ದುಗೊಳಿಸಿದರು. ಈ ವ್ಯವಸ್ಥೆಯೂ ಭಾರತದ ಸಂವಿಧಾನದ ಮೇಲೆ ನಡೆಸಲಾಗುವುದು, ಶರಿಯತ್ ಅಲ್ಲ ಎಂದು ಆದಿತ್ಯನಾಥ್ ಎಐಎಂಐಎಂ ಮುಖ್ಯಸ್ಥ ಓವೈಸಿ ಅವರ ‘ಹಿಜಾಬ್ ಧರಿಸಿದ ಮಹಿಳೆ ಮುಂದೊಂದು ದಿನ ಪ್ರಧಾನಿಯಾಗುತ್ತಾರೆ” ಎಂಬ ಮಾತಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ :
ಹಿಜಾಬ್ ಧರಿಸದಿದ್ದರೆ ಅತ್ಯಾಚಾರ ಹೆಚ್ಚಾಗುತ್ತದೆ : ಜಮೀರ್ ಅಹ್ಮದ್ ಖಾನ್ – Vishwanews24
“ನಾವು ನಮ್ಮ ವೈಯಕ್ತಿಕ ಧಾರ್ಮಿಕ ನಂಬಿಕೆಗಳು ಮತ್ತು ಆಯ್ಕೆಗಳನ್ನು ದೇಶ ಮತ್ತು ಅದರ ಸಂಸ್ಥೆಗಳ ಮೇಲೆ ಹೇರಲು ಸಾಧ್ಯವಿಲ್ಲ. ನಾನು ಉತ್ತರಪ್ರದೇಶದಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಕೇಸರಿ ವಸ್ತ್ರ ಧರಿಸಲು ಹೇಳಬಹುದೇ? ಶಾಲೆಗಳಲ್ಲಿ ಡ್ರೆಸ್ ಕೋಡ್ ಜಾರಿಗೊಳಿಸಬೇಕು.ದೇಶವು ಸಂವಿಧಾನದ ಪ್ರಕಾರ ನಡೆದಾಗ, ಮಹಿಳೆಯರಿಗೆ ಅವರ ಗೌರವ, ಭದ್ರತೆ ಮತ್ತು ಸ್ವಾತಂತ್ರ್ಯ ಸಿಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ :
ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರ ; ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು – Vishwanews24
