ದೇಶದಾದ್ಯಂತ 100 ಕೋಟಿ ಡೋಸ್ ಕೋವಿಡ್‌-19 ಲಸಿಕೆ ವಿತರಿಸಿರುವುದು ಐತಿಹಾಸಿಕ ಮತ್ತು ಹೆಮ್ಮೆಯ ಕ್ಷಣ : ಅಮಿತ್‌ ಶಾ – Vishwanews24

Featured, ರಾಷ್ಟ್ರ ನ್ಯೂಸ್

ದೇಶದಾದ್ಯಂತ 100 ಕೋಟಿ ಡೋಸ್ ಕೋವಿಡ್‌-19 ಲಸಿಕೆ ವಿತರಿಸಿರುವುದು ಐತಿಹಾಸಿಕ ಮತ್ತು ಹೆಮ್ಮೆಯ ಕ್ಷಣ : ಅಮಿತ್‌ ಶಾ – Vishwanews24

ನವದೆಹಲಿ: ದೇಶದಾದ್ಯಂತ 100 ಕೋಟಿ ಡೋಸ್ ಕೋವಿಡ್‌-19 ಲಸಿಕೆ ವಿತರಿಸಿರುವುದು ʼಐತಿಹಾಸಿಕ ಮತ್ತು ಹೆಮ್ಮೆಯ ಕ್ಷಣʼ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿರುವ ಶಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಮತ್ತು ನಿರಂತರ ಪ್ರೋತ್ಸಾಹದಿಂದಾಗಿ ನೂರು ಕೋಟಿ ಡೋಸ್‌ ಕೋವಿಡ್-19‌ ಲಸಿಕೆ ವಿತರಣೆಯ ಗುರಿ ಸಾಧಿಸಿದ್ದೇವೆ. ಆ ಮೂಲಕ ದಾಖಲೆ ಬರೆದಿರುವುದು ಐತಿಹಾಸಿಕ ಮತ್ತು ಹೆಮ್ಮೆಯ ಕ್ಷಣವಾಗಿದೆ. ಇದು ಅಸಾಧಾರಣ ಸಾಮರ್ಥ್ಯದೊಂದಿಗೆ ನವ ಭಾರತವನ್ನು ಜಗತ್ತಿಗೆ ಮತ್ತೊಮ್ಮೆ ಪರಿಚಯಿಸಿದೆ ಎಂದು ತಿಳಿಸಿದ್ದಾರೆ.

ಈ ಮೈಲುಗಲ್ಲು ಮುಟ್ಟಲು ನೆರವಾದ ದೇಶದ ಎಲ್ಲ ವಿಜ್ಞಾನಿಗಳು, ಸಂಶೋದಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ʼಈ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವನ್ನು ಅಭಿನಂದಿಸುತ್ತೇನೆ. ಹಲವು ಸವಾಲುಗಳನ್ನು ಮೀರಿ ದೊಡ್ಡ ಕಾರ್ಯ ಸಾಧಿಸಲು ಕೊಡುಗೆ ನೀಡಿದ್ದಕ್ಕಾಗಿ ಎಲ್ಲ ವಿಜ್ಞಾನಿಗಳು, ಸಂಶೋದಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಮತ್ತು ಸುರಕ್ಷತೆ ಕಡೆಗಿನ ಪ್ರಧಾನಿ ಮೋದಿ ಅವರ ಬದ್ದತೆಯನ್ನು ಅಭಿನಂದಿಸುತ್ತೇನೆʼ ಎಂದು ಹೇಳಿದ್ದಾರೆ.

ಉಳ್ಳಾಲ: ವಾರೆಂಟ್ ಆರೋಪಿಯನ್ನು ಹಿಡಿಯಲು ಹೋದಾಗ ಪೊಲೀಸರಿಗೆ ತಲವಾರು ತೋರಿಸಿ ರೌಡಿ ಶೀಟರ್ ಪರಾರಿ : ಓರ್ವ ಅರೆಸ್ಟ್ – Vishwanews24