ದೈನಂದಿನ ಲಸಿಕಾ ಅಭಿಯಾನದಲ್ಲಿ ಭಾರತ ಜಾಗತಿಕವಾಗಿ ಅಗ್ರ ಸ್ಥಾನದಲ್ಲಿದೆ : ಬಿಜೆಪಿ -Vishwanews24
ದೈನಂದಿನ ಲಸಿಕಾ ಅಭಿಯಾನದಲ್ಲಿ ಭಾರತ ಜಾಗತಿಕವಾಗಿ ಅಗ್ರ ಸ್ಥಾನದಲ್ಲಿದೆ : ಬಿಜೆಪಿ -Vishwanews24
ಬೆಂಗಳೂರು: ‘ದೈನಂದಿನ ಲಸಿಕೆ ನೀಡುವಿಕೆಯಲ್ಲಿ ಭಾರತ 18 ಪ್ರಮುಖ ದೇಶಗಳನ್ನು ಹಿಂದಿಕ್ಕಿದೆ’ ಎಂದು ಬಿಜೆಪಿ ಹೇಳಿದೆ.
ಲಸಿಕಾ ಅಭಿಯಾನ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ದೈನಂದಿನ ಲಸಿಕಾ ಅಭಿಯಾನದಲ್ಲಿ ಭಾರತ ಜಾಗತಿಕವಾಗಿ ಅಗ್ರ ಸ್ಥಾನದಲ್ಲಿದೆ’ ಎಂದು ಹೇಳಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ದೇಶವ್ಯಾಪಿಯಾಗಿ 2.50 ಕೋಟಿ ಡೋಸ್ಗೂ ಅಧಿಕ ಲಸಿಕೆ ವಿತರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಕರ್ನಾಟಕದಲ್ಲಿ ಒಂದೇ ದಿನದಲ್ಲಿ 28.4 ಲಕ್ಷ ಡೋಸ್ ವಿತರಿಸುವ ಮೂಲಕ ಇದುವರೆಗೆ 5.14 ಕೋಟಿ ಡೋಸ್ ವಿತರಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ’ ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.
‘ಸೆ.17ರಂದು ನಡೆದ ಮೆಗಾ ಲಸಿಕಾ ಮೇಳದಲ್ಲಿ ಬೆಳಗಾವಿ ಜಿಲ್ಲೆಯು ದೇಶದಲ್ಲೇ 2ನೇ ಸ್ಥಾನ ಗಳಿಸಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ದೈನಂದಿನ ಲಸಿಕೆ ಸಂಖ್ಯೆಗಳಲ್ಲಿ 18 ಪ್ರಮುಖ ದೇಶಗಳನ್ನು ಹಿಂದಿಕ್ಕುವ ಮೂಲಕ ಲಸಿಕಾ ಅಭಿಯಾನದಲ್ಲಿ ಜಾಗತಿಕ ನಾಯಕನಾಗಿದೆ ಭಾರತ.#IndiaFightsCorona pic.twitter.com/NbT7BGDHVi
— BJP Karnataka (@BJP4Karnataka) September 18, 2021
