ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ : ದರ್ಶನ್ ಫ್ಯಾನ್ಸ್​ ಮುತ್ತಿಗೆಯಿಂದ ಬೇಸರ ವ್ಯಕ್ತಪಡಿಸಿದ ಜಗ್ಗೇಶ್ -Vishwanews24

Featured, ರಾಜ್ಯ ನ್ಯೂಸ್

ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ : ದರ್ಶನ್ ಫ್ಯಾನ್ಸ್​ ಮುತ್ತಿಗೆಯಿಂದ ಬೇಸರ ವ್ಯಕ್ತಪಡಿಸಿದ ಜಗ್ಗೇಶ್ -Vishwanews24

ಬೆಂಗಳೂರು: ನಾನು ಅಪ್ಪನಿಗೆ ಹುಟ್ಟಿದವನು ಎಲ್ಲಿ ಹೋಗಲ್ಲ. ಹಿಂದೆ ಮುಂದೆ ಮುಚ್ಚಿಟ್ಟುಕೊಂಡು ಯಾಕೆ ಮಾತನಾಡಲಿ ಎಂದು ಜಗ್ಗೇಶ್ ನಿನ್ನೆ ದರ್ಶನ್ ಅಭಿಮಾನಿಗಳು ಮಾತನಾಡಿರುವ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಲೈವ್ ಬಂದು ಬೇಸರವನ್ನು ಹೊರಹಾಕಿದ್ದಾರೆ.

ಒಂದು ವಿಷಯವನ್ನು ಇಟ್ಟುಕೊಂಡು ನನಗೆ ಬೇಸರ ಮಾಡುತ್ತಿದ್ದಾರೆ. ಸಣ್ಣ ವಿಷಯವನ್ನು ಇಟ್ಟುಕೊಂಡು ನೋವು, ಅಪಮಾನವನ್ನು ಮಾಡಿದರೆ ನನಗೆ ಯಾವುದೇ ನಷ್ಟವಿಲ್ಲ. ನಾನು ಕಳ್ಳತನ, ರಾಬರಿ ಮಾಡಿದ್ದೀನಾ? ಹೆದರಿ ಕೂತಿದೀನಾ? ನಿನ್ನೆ ಬಂದಿರುವವರ ಜೊತೆಯಲ್ಲಿ ಅವರೊಂದಿಗೆ ಕೂತು ಮಾತನಾಡಿದ್ದೇನೆ ಎಂದಿದ್ದಾರೆ.

ನಾನು ಸಿನಿಮಾ ರಂಗಕ್ಕೆ ಬಂದು 40 ವರ್ಷವಾಯಿತು. ನಾನು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಯಾರು ಹುಟ್ಟಿರಲಿಲ್ಲ. 80ನೇ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದವನು ನಾನು, ರಾಜ್‍ಕುಮಾರ್, ವಿಷ್ಣುವರ್ಧನ್, ಪ್ರಭಾಕರ್ ಅವರ ಜೊತೆಗೆ ಹೆಜ್ಜೆ ಹಾಕುತ್ತಾ ಬಂದಿರುವನು ನಾನು. ಇಲ್ಲಿವರೆಗೂ ಬಂದಿದ್ದೇನೆ ಎಂದರೆ ಎಲ್ಲಾ ನನ್ನ ಕನ್ನಡಿಗರಿಂದಾಗಿದೆ. ಕನ್ನಡಕ್ಕಾಗಿಯೆ ಬದುಕುತ್ತಿದ್ದೇನೆ ಮುಂದೆಯು ಬದುಕುತ್ತೇನೆ. ಇಲ್ಲಯವರೆಗೂ ಬೇರೆ ಭಾಷೆಗಳಲ್ಲಿ ಕಾಣಿಸಿಕೊಂಡಿ, ನನಗೆ ಬೇಕಾಗಿಲ್ಲ ಎಂದಿದ್ದಾರೆ.

ಚಿಕ್ಕಬಳ್ಳಾಪುರ ಜಿಲೆಟಿನ್ ದುರಂತ : ನೊಂದ ಕುಟುಂಬಗಳಿಗೆ ತಕ್ಷಣ ಪರಿಹಾರ ಘೋಷಿಸಿ : ಸಿದ್ದರಾಮಯ್ಯ -Vishwanews24

ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರನ್ನು ಕಳೆದುಕೊಂಡ ಹೋದ ಮೇಲೆ ಕನ್ನಡ ಸ್ವಾಭಿಮಾನವು ಸಾಯುತ್ತಿದೆ. ಉಳಿದಿರುವುದು ನಾವು ಕೆಲವರು ಮಾತ್ರ ನಾವು ಸತ್ತ ಮೇಲೆ ನಮ್ಮ ತಿಥಿಯನ್ನು ಮಾಡಿ ಸಂತೋಷವನ್ನು ಪಡಿ. ನನಗೆ ಬಹಳ ನೋವು ಕೊಟ್ಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನಗೆ ಬುದ್ದಿ ಕಲಿಸಬೇಕಾದವರು ರಾಘವೇಂದ್ರ ಸ್ವಾಮಿಗಳು, ನನ್ನ ಕನ್ನಡಿಗರು, ಹೆತ್ತವರಾಗಿದ್ದಾರೆ. ಯಾವೂಬ್ಬ ನಟ ಮತ್ತು ಅವನ ಅಭಿಮಾನಿಗಳು ಬರಲು ಸಾಧ್ಯವಾಗಲ್ಲ. ನನ್ನ ಪಾಡಿಗೆ ನನ್ನ ಬಿಡಿ ನಾನು ಕನ್ನಡ ತಾಯಿ ಸೇವೆ ಮಾಡಿಕೊಂಡು ಇರುತ್ತೇನೆ, ಕನ್ನಡದ ನಟನಾಗಿರುತ್ತೇನೆ ಎಂದಿದ್ದಾರೆ.

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ : ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಬಸವರಾಜ ಬೊಮ್ಮಾಯಿ -Vishwanews24

ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನು ಮುಂದಿನ ದಿನಗಳಲ್ಲಿ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಸಿನಿಮಾ ಹಾಗೂ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಟಿವಿ ಶೋಗಳಿಗೆ ಮಾತ್ರ ಬದುಕು ಮೀಸಲು ಇಡುತ್ತೇನೆ.

ತುಂಬ ತಾಮಸವಾಗಿದೆ ನನಗೆ ನಮ್ಮರಂಗ, ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲೆಟಿನ್ ದುರಂತ : ಪ್ರಧಾನಿ ಮೋದಿ ಸಂತಾಪ -Vishwanews24