ದ್ವೇಷ ಭಾಷಣ ಮಸೂದೆಗೆ ಇಂದೇ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯುತ್ತೇವೆ : ಪರಮೇಶ್ವರ್ -vishwanews24
ದ್ವೇಷ ಭಾಷಣ ಮಸೂದೆಗೆ ಇಂದೇ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯುತ್ತೇವೆ ..
ದ್ವೇಷ ಭಾಷಣ ಮಸೂದೆಯನ್ನ ಬಿಜೆಪಿ ಟಾರ್ಗೆಟ್ ಮಾಡೋದಕ್ಕೆ ತರ್ತಿಲ್ಲ : ಪರಮೇಶ್ವರ್
ಬೆಂಗಳೂರು: ದ್ವೇಷ ಭಾಷಣ ಮಸೂದೆ ಮಂಡನೆಗೆ ಇಂದೇ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯುತ್ತೇವೆ ಎಂದಿರುವ ಗೃಹ ಸಚಿವ ಜಿ. ಪರಮೇಶ್ವರ್ ಈ ಮಸೂದೆಯನ್ನ ಬಿಜೆಪಿ ಟಾರ್ಗೆಟ್ ಮಾಡೋದಕ್ಕೆ ತರ್ತಿಲ್ಲ ಎಂದು ಹೇಳಿದ್ದಾರೆ.
ಶಾಸಕಾಂಗ ಪಕ್ಷದ ಸಭೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದ್ವೇಷ ಭಾಷಣ ಸಂಬಂಧ ಮಸೂದೆ ಮಂಡನೆಗೆ ಇಂದು ಸಂಪುಟದಲ್ಲಿ ಚರ್ಚಿಸಿ ಅನುಮತಿ ಪಡೆಯುತ್ತೇವೆ. ಈಗ ಇರುವ ಕಾಯ್ದೆಯನ್ನೇ ಇನ್ನಷ್ಟು ಬಲಪಡಿಸುವ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.
ಉಡುಪಿ: ಆನ್ಲೈನ್ ವಂಚನೆ : 12.25 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ – vishwanews24
ಇನ್ನೂ ದ್ವೇಷ ಭಾಷಣ ಮಸೂದೆಯನ್ನ ಬಿಜೆಪಿ ಟಾರ್ಗೆಟ್ ಮಾಡಲು ತರ್ತಿಲ್ಲ. ಅದೆಲ್ಲ ಸುಳ್ಳು ಆರೋಪ. ಅಧಿಕಾರದಲ್ಲಿ ನಾವೇ ಶಾಶ್ವತವಾಗಿ ಇರ್ತೀವಾ? ಅವರು ಬರಲ್ವಾ? ಯಾರೇ ಬಂದರೂ ಕಾಯ್ದೆ ಅದೇ ಇರುತ್ತೆ ಎಂದು ತಿಳಿಸಿದರು.
ಸಿಎಂ-ಡಿಸಿಎಂ ಪರ ಘೋಷಣೆ ಕೂಗಿದ ವಿಚಾರಕ್ಕೆ ಉತ್ತರಿಸಿ, ಒಬ್ಬೊಬ್ಬ ನಾಯಕರಿಗೆ ಒಂದಷ್ಟು ಅಭಿಮಾನಿಗಳು ಇರ್ತಾರೆ. ಅವರು ಜೈಕಾರ ಹಾಕುತ್ತಿರುತ್ತಾರೆ, ಅದು ತಪ್ಪು ಅಂತ ಹೇಳಕ್ಕಾಗಲ್ಲ. ಸಮಸ್ಯೆಗಳು ಬಗೆಹರಿದ್ರೆ ಇವೆಲ್ಲ ನಿಂತು ಹೋಗುತ್ತವೆ ಎಂದರು.
ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಸಭೆ ನಡೆಸಲು ನನಗೆ ಅವಕಾಶ ನೀಡಿಲ್ಲ : ರಾಹುಲ್ ಗಾಂಧಿ ಅಸಮಾಧಾನ – vishwanews24
