ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾಪು ಘಟಕ :ಆಯುಷ್ಮಾನ್ ಕಾರ್ಡ್ ವಿತರಣೆ ಯೋಜನೆ ಕಾರ್ಯಕ್ರಮ ಉದ್ಘಾಟನೆ: vishwanews24
ಧರ್ಮಸ್ಥಳ ಗ್ರಾಮಾಭಿವೃದ್ದಿ
ಯೋಜನೆ ಕಾಪು ಘಟಕ
:ಆಯುಷ್ಮಾನ್ ಕಾರ್ಡ್ ವಿತರಣೆ
ಯೋಜನೆ ಕಾರ್ಯಕ್ರಮ ಉದ್ಘಾಟನೆ: vishwanews24
ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ಒಕ್ಕೂಟ ಇದರ ವತಿಯಿಂದ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಹಾಗೂ ಅಭಾ ಕಾರ್ಡ್ ಸಂಯೋಜನೆಯೊಂದಿಗೆ ಉಚಿತ ಹೊಸ ಆಯುಷ್ಮನ್ ಕಾರ್ಡ್ನ ಉದ್ಘಾಟನಾ ಸಮಾರಂಭ ಮಹಾದೇವಿ ಪ್ರೌಢಶಾಲೆಯಲ್ಲಿ ನಡೆಯಿತು
ಈ ಕಾರ್ಯಕ್ರಮವನ್ನು ಕಾಪು ಪುರಸಭೆಯ ಸದಸ್ಯರಾದ ಅನಿಲ್ ಕುಮಾರ್ ಅವರು ಉದ್ಘಾಟನೆ ನೆರವೇರಿಸಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಾದ ಶ್ರೀಮತಿ ಜಯಂತಿ ರವರು ಕಾಪು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರಮಾ ಎಸ್ ಶೆಟ್ಟಿಯವರು. ವಲಯದ ಮೇಲ್ವಿಚಾರಕರಾದ ಶ್ರೀಮತಿ ಮಮತಾ ರವರು. ಕಾಪು A ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಬಂಗೇರ.ಒಕ್ಕೂಟದ ಎಲ್ಲಾ ಪದಾಧಿಕಾರಿಗಳು. ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು
ಶ್ರೀಮತಿ ಪ್ರೇಮ ರಮೇಶ್ ರವರು ಸ್ವಾಗತವನ್ನು ನೆರವೇರಿಸಿದರು ಧನ್ಯವಾದ ಕಾರ್ಯಕ್ರಮವನ್ನು ಉಷ ಉಮೇಶ್ ಕರ್ಕೆರ ನೆರವೇರಿಸಿದರು.

