ನಟ ಸಂಜಯ್​ ದತ್​ಗೆ ಶ್ವಾಸಕೋಶದ ಕ್ಯಾನ್ಸರ್​; ಚಿಕಿತ್ಸೆಗಾಗಿ ಅಮೆರಿಕಕ್ಕೆ ಪ್ರಯಾಣ -Vishwanews24

Featured, ರಾಷ್ಟ್ರ ನ್ಯೂಸ್, ಸಿನಿಮಾ

ಮುಂಬೈ: ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಇದೀಗ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ.

ಈ ಸಂಬಂಧ ಪತ್ರಕರ್ತ ಕೋಮಲ್ ನಹ್ತಾ ಅವರು ಟ್ವೀಟ್ ಮಾಡಿ, ಸಂಜಯ್ ದತ್ ಅವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರು ಬೇಗ ಹುಷಾರಾಗಲಿ ಎಂದು ಪ್ರಾರ್ಥಿಸಿ ಅಂತ ತಿಳಿಸಿದ್ದಾರೆ.

ಇತ್ತ ಸಂಜಯ್ ದತ್ ಟ್ವೀಟ್ ಮಾಡಿ, ಸಿನಿಮಾದಿಂದ ಸಣ್ಣ ಬ್ರೇಕ್ ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ನನಗೆ ಚಿಕಿತ್ಸೆ ಮಾಡಿಸಿಕೊಳ್ಳಬೇಕಿದ್ದು, ಸ್ನೇಹಿತರು ಕುಟುಂಬಸ್ಥರು ನನ್ನ ಜೊತೆಗಿದ್ದಾರೆ. ಹೀಗಾಗಿ ನನ್ನ ಆತ್ಮೀಯರು ಏನೂ ಯೋಚನೆ ಮಾಡಬೇಡಿ. ಅಲ್ಲದೆ ವದಂತಿಗಳನ್ನು ಕೂಡ ನಂಬಬೇಡಿ. ನಿಮ್ಮೆಲ್ಲರ ಹಾರೈಕೆಯಿಂದ ನಾನು ಅತೀ ಶೀಘ್ರವೇ ಹುಷಾರಾಗಿ ನಿಮ್ಮ ಮುಂದೆ ಬರುತ್ತೇನೆ ಎಂದು ಬರೆದುಕೊಂಡಿದ್ದಾರೆ.

https://twitter.com/duttsanjay/status/1293142626850336775?ref_src=twsrc%5Etfw%7Ctwcamp%5Etweetembed%7Ctwterm%5E1293142626850336775%7Ctwgr%5E&ref_url=https%3A%2F%2Fpublictv.in%2Fbollywood-actor-sanjay-dutt-diagnosed-with-lung-cancer

ನಟನ ಆಪ್ತರೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನಟರಿಗೆ ಕ್ಯಾನ್ಸರ್ ತುಂಬಾನೇ ಜೋರಾಗಿದೆ. ಪತ್ನಿ ಹಾಗೂ ಪುಟ್ಟ ಮಕ್ಕಳು ದುಬೈನಲ್ಲಿದ್ದು, ಮಕ್ಕಳ ಬಗ್ಗೆ ನಟ ಚಿಂತೆಗೀಡಾಗಿದ್ದಾರೆ. ಸದ್ಯ ಸಂಜಯ್ ಅವರಿಗೆ ತಕ್ಷಣವೇ ಚಿಕಿತ್ಸೆಯ ಅಗತ್ಯತೆ ಇದೆ. ಹೀಗಾಗಿ ಅವರು ಅಮೆರಿಕಕ್ಕೆ ತೆರಳುತ್ತಾರೆ ಎಂದು ತಿಳಿಸಿದರು.