ನನ್ನದು ದತ್ತಾತ್ರೇಯ ಗೋತ್ರ, ಹಾಗೂ ನನ್ನ ಕುಟುಂಬ ಕಾಶ್ಮೀರಿ ಬ್ರಾಹ್ಮಣ : ರಾಹುಲ್ ಗಾಂಧಿ
ಜೈಪುರ: ವಿಧಾನಸಭಾ ಚುನಾವಣೆಯತ್ತ ಮುಖ ಮಾಡಿರುವ ರಾಜಸ್ಥಾನದ ಪ್ರಸಿದ್ಧ ಪುಷ್ಕರ್ ನಲ್ಲಿನ ಬ್ರಹ್ಮ ದೇವಸ್ಥಾನಕ್ಕೆ ಇಂದು ಸೋಮವಾರ ಭೇಟಿ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತನ್ನದು ದತ್ತಾತ್ರೇಯ ಗೋತ್ರವೆಂದೂ ತಾನು ಕೌಲ ಬ್ರಾಹ್ಮಣ ನೆಂದೂ ಬಹಿರಂಗಪಡಿಸಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಗೋತ್ರ ಯಾವುದು ಎಂಬ ಬಿಜೆಪಿ ಪ್ರಶ್ನೆಗೆ ಸ್ವತಃ ರಾಹುಲ್ ಗಾಂಧಿ ಅವರೇ ಉತ್ತರಿಸಿದ್ದಾರೆ. ರಾಜಸ್ಥಾನದ ಪುಷ್ಕರ ನಗರದಲ್ಲಿ ಬ್ರಹ್ಮ ದೇವಾಲಯಕ್ಕೆ ರಾಹುಲ್ ಭೇಟಿ ನೀಡಿದ್ದ ವೇಳೆ ಅಲ್ಲಿನ ಅರ್ಚಕರಿಗೆ ತಮ್ಮ ಕುಲ ಗೋತ್ರಗಳ ಬಗ್ಗೆ ಮಾಹಿತಿ ನೀಡಿದ್ದಾರೆ..
ತನ್ನದು ದತ್ತಾತ್ರೇಯ ಗೋತ್ರ ಎಂದೂ, ತಾನು ಕೌಲ ಬ್ರಾಹ್ಮಣಕ್ಕೆ ಸೇರಿದವನೆಂದೂ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಪೂಜೆಯ ಬಳಿಕ, ಈ ಬಗ್ಗೆ ಮಾತನಾಡಿರುವ ಬ್ರಹ್ಮ ದೇವಾಲಯದ ಅರ್ಚಕರು ರಾಹುಲ್ ಗಾಂಧಿ ಅವರು ತಮ್ಮದು ದತ್ತಾತ್ರೇಯ ಗೋತ್ರ, ತಮ್ಮ ಕುಟುಂಬ ಕಾಶ್ಮೀರಿ ಬ್ರಾಹ್ಮಣ ಪಂಗಡಕ್ಕೆ ಸೇರಿದ್ದೆಂದು ಹೇಳಿರುವುದಾಗಿ ತಿಳಿಸಿದರು.
ಕೌಲ್ ಎಂಬುದು ಸಂಸ್ಕೃತದ ಕುಲ್ ಪದವಾಗಿದ್ದು, ಕಾಶ್ಮೀರಿ ಪಂಡಿತರು ಬಳಸುವ ಉಪನಾಮವಾಗಿದೆ. ಮೋತಿಲಾಲ್ ನೆಹರು, ಜವಹಾರಲಾಲ್ ನೆಹರು, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಇವರೆಲ್ಲ ಅಲಹಾಬಾದ್ ನಲ್ಲಿ ನೆಲೆಸಿದ್ದ ಕಾಶ್ಮೀರಿ ಪಂಡಿತರು ಎಂದು ಅರ್ಚಕರು ಹೇಳಿದ್ದಾರೆ.
ತನ್ನದು ದತ್ತಾತ್ರೇಯ ಗೋತ್ರ ಎಂದೂ, ತಮ್ಮ ಕುಟುಂಬ ಕಾಶ್ಮೀರಿ ಬ್ರಾಹ್ಮಣ ಪಂಗಡಕ್ಕೆ ಸೇರಿದ್ದೆಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಪೂಜೆಯ ಬಳಿಕ ಬ್ರಹ್ಮ ದೇವಾಲಯದ ಅರ್ಚಕರು ತಿಳಿಸಿದ್ದಾರೆ.
